ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿನಂಬ್ರ ಹಿನ್ನಲೆಯನ್ನು ಮುಂದಿಟ್ಟುಕೊಂಡು ಹ್ಯಾಸ್ಯಾಸ್ಪದವಾಗಿ, ಕೀಳು ಮಟ್ಟದಲ್ಲಿ ಅವರನ್ನು ಕಾಂಗ್ರೆಸ್ನ ಆನ್ಲೈನ್ ಮ್ಯಾಗಜೀನ್ ಯುವದೇಶ್ನಲ್ಲಿ ಬಿಂಬಿಸಿದ ಯುವ ಕಾಂಗ್ರೆಸ್ನ ಕೃತ್ಯ ಭಾರೀ ವಿವಾದಕ್ಕೀಡಾಗಿದೆ.
ಎಲ್ಲಡೆ ಆಕ್ರೋಶಗಳು ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಈ ಮೀಮ್ನ ಸೃಷ್ಟಿಕರ್ತ, ಯುವ ಕಾಂಗ್ರೆಸ್ ಮುಖಂಡ ಅಮರೇಂದರ್ ಸಿಂಗ್ ರಾಜ ಕೊನೆಗೂ ಕ್ಷಮೆಯಾಚನೆ ಮಾಡಿದ್ದಾನೆ. ಪೋಸ್ಟ್ನ್ನು ಡಿಲೀಟ್ ಮಾಡಿದ್ದಾನೆ.
ಕಾಂಗ್ರೆಸ್ ಕೂಡ ಇಂತಹ ಹಾಸ್ಯಭರಿತ ಮೀಮ್ಗಳನ್ನು ನಾವು ಒಪ್ಪುವುದಿಲ್ಲ. ದೇಶದ ಪ್ರಧಾನಿಗಳ ಬಗ್ಗೆ ನಮಗೆ ಗೌರವವಿದೆ. ಎಲ್ಲಾ ರಾಜಕೀಯ ವಿರೋಧಿಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದಿದೆ.
ಆದರೆ ಬಿಜೆಪಿ ಇದನ್ನು ಕಟುವಾಗಿ ಖಂಡಿಸಿದ್ದು, ಕಾಂಗ್ರೆಸ್ನ ರೋಗಗ್ರಸ್ಥ ಮನಸ್ಥಿತಿಯನ್ನು ಇದು ಪ್ರದರ್ಶಿಸಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.