ಅಲಿಘಢ: ಕಾನೂನು ನಿಯಮವನ್ನು ಪಾಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ, ಕಳೆದ 8 ತಿಂಗಳುಗಳಿಂದ ಉತ್ತರಪ್ರದೇಶದಲ್ಲಿ ಯಾವುದೇ ಕೋಮು ಸಂಘರ್ಷಗಳು ಉದ್ಭವಿಸಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
‘ಹಿಂದಿನ ಸರ್ಕಾರದ ಆಡಳಿತದಲ್ಲಿ ಪ್ರತಿ ವಾರ ಕೋಮು ಗಲಭೆಗಳಾಗುತ್ತಿತ್ತು, ಗಲಭೆ ಹತ್ತಿಕ್ಕಲು ಅವರು ವಿಫಲರಾಗುತ್ತಿದ್ದರು. ಆದರೆ ಕಳೆದ 8 ತಿಂಗಳಲ್ಲಿ ಗಲಭೆಗಳಾಗಿಲ್ಲ. ಬಿಜೆಪಿ ಆಡಳಿತ ಹಿಡಿದ ಸಂದರ್ಭ ಅಸ್ಥಿರತೆ, ಗೂಂಡಾಗಿರಿಗಳಿದ್ದವು, ಈಗ ಎಲ್ಲವೂ ಶಾಂತವಾಗಿದೆ’ ಎಂದು ಸಾರ್ವಜನಿಕ ಸಭೆಯಲ್ಲಿ ಅವರು ಹೇಳಿದ್ದಾರೆ.
ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ, ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಲು, ಕಿಡ್ನ್ಯಾಪ್ ಮಾಡಲು ಯಾರಿಗೂ ಈಗ ಧೈರ್ಯವಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.