ಶ್ರೀನಗರ: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಒಟ್ಟು 190 ಉಗ್ರರನ್ನು ಕೊಂದು ಹಾಕಿವೆ. ಇವರಲ್ಲಿ ಬಹುತೇಕರು ವಿದೇಶಿ ಉಗ್ರರೇ ಆಗಿದ್ದಾರೆ. ಪ್ರಸ್ತುತ ಕಣಿವೆಯಲ್ಲಿ 200 ಉಗ್ರರ ಸಕ್ರಿಯರಾಗಿರುವ ಬಗ್ಗೆ ಮಾಹಿತಿ ಇದೆ.
ಶ್ರೀನಗರದಲ್ಲಿ ಜಂಟಿ ಪತ್ರಿಕಾ ಪ್ರಕಟನೆ ನೀಡಿರುವ ಜನರಲ್ ಆಫೀಸರ್ ಕಮಾಂಡಿಂಗ್, ಶ್ರೀನಗರ ಮೂಲದ ಕಾರ್ಪ್ಸ್, ಲೆ.ಜನರಲ್ ಜೆಎಸ್ ಸಂಧು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
’ಕಾಶ್ಮೀರದಲ್ಲಿ ಈ ವರ್ಷ ಹಲವಾರು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. 2017 ರಲ್ಲಿ 190 ಉಗ್ರರನ್ನು ಹತ್ಯೆ ಮಾಡಿದ್ದೇವೆ. ಇದರಲ್ಲಿ 80 ಉಗ್ರರು ಮಾತ್ರ ಸ್ಥಳಿಯರು, ಉಳಿದ 110 ಮಂದಿ ವಿದೇಶಿಗರು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.