ಹೈದರಾಬಾದ್: ಶೀಘ್ರದಲ್ಲೇ ಹೈದರಾಬಾದ್ ಮೆಟ್ರೋ ರೈಲು ಸ್ಟೇಶನ್ನನ್ನು ಒಳಗೊಂಡ ದೇಶದ ನಗರಗಳ ಪಟ್ಟಿಗೆ ಸೇರಲಿದೆ. ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಿರ್ಮಾಣಗೊಂಡಿರುವ ಮೆಟ್ರೋ ರೈಲು ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಮಿಯಾಪುರ್ ಮೆಟ್ರೋ ರೈಲು ಸ್ಟೇಶನ್ನಲ್ಲಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೈದರಾಬಾದ್ ಮೆಟ್ರೋ ರೈಲ್ ಲಿಮಿಟೆಡ್ ಹೇಳಿದೆ. ಲೋಕಾರ್ಪಣೆಯಾದ ಬಳಿಕ ಇದು ಸಾರ್ವಜನಿಕರಿಗೆ ದಿನದಲ್ಲಿ ಎರಡು ಗಂಟೆಗಳ ಕಾಲ ಮುಕ್ತವಾಗಲಿದೆ.
ಮುಂಬಯಿ-ಹೈದರಾಬಾದ್ ನ್ಯಾಷನಲ್ ಹೈವೇಯ ಮೊದಲ ಹಂತದ ಮೆಟ್ರೊ 30 ಕಿ.ಮೀ.ನ್ನು ಒಳಗೊಳ್ಳಲಿದೆ. ಈ ಯೋಜನೆಯು 3 ಕಾರಿಡಾರ್ಗಳೊಂದಿಗೆ 72 ಕಿ.ಮೀ. ಇರಲಿದೆ.
ಲೋಕಾಪರ್ಣೆಯ ನಂತರ ಪ್ರಧಾನಿ ಮೋದಿ ಹೈದರಾಬಾದಿನಲ್ಲಿ ನಿಜಾಮ್ ಸ್ಟೇಟ್ ರೈಲ್ವೇಯಿಂದ ಮೆಟ್ರೋ ರೈಲು ಯೋಜನೆಯವರೆಗೆ ವಿಕಸನಗೊಂಡಿರುವ ಡಿಜಿಟಲ್ ಇಮೇಜ್ಗಳನ್ನು ವೀಕ್ಷಿಸಲಿದ್ದಾರೆ. ಲೋಕಾರ್ಪಣೆಗೊಂಡ ಮೆಟ್ರೋದಲ್ಲಿ ರಾಜ್ಯದ ಗವರ್ನರ್ ಇಎಸ್ಎಲ್ ನರಸಿಂಹನ್, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತಿತರ ಅಧಿಕಾರಿಗಳೊಂದಿಗೆ ಅವರೊಂದಿಗೆ ಪ್ರಧಾನಿ ಮೋದಿ ಸುಮಾರು 13 ಕಿ.ಮೀ. ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಹೈದರಾಬಾದ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಅಂದು ಸಂಜೆ ನೀತಿ ಆಯೋಗದ ಸಹಯೋಗದೊಂದಿಗೆ ಅಮೆರಿಕ ಸರ್ಕಾರ ಆಯೋಜಿಸಿದ ಮೂರು ದಿನಗಳ ಗ್ಲೋಬಲ್ ಎಂಟರ್ಪ್ರೆನರ್ಷಿಪ್ ಶೃಂಗಸಭೆಯನ್ನು ಮೋದಿ ಉದ್ಘಾಟಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.