ನವದೆಹಲಿ: ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದವರು ( PIO) ಬ್ಯಾಂಕ್ ಅಕೌಂಟ್ ಅಥವಾ ಇನ್ನಿತರ ಯಾವುದೇ ದಾಖಲೆಗಳಿಗೆ ಆಧಾರ್ ಕಾರ್ಡ್ನ್ನು ಲಿಂಕ್ ಮಾಡಬೇಕಾಗಿಲ್ಲ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ.
ಹಣಕಾಸು ಅಕ್ರಮ ತಡೆ ಕಾಯ್ದೆ 2017 ಮತ್ತು ಆದಾಯ ತೆರಿಗೆ ಕಾಯ್ದೆ ಸ್ಪಷ್ಟವಾಗಿ ತಿಳಿಸಿರುವಂತೆ ಆಧಾರ್ ನೋಂದಣಿ ಮಾಡಿಕೊಳ್ಳಲು ಅರ್ಹತೆ ಇರುವವರು ಮಾತ್ರ ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್ಗಳಿಗೆ ಆಧಾರನ್ನು ಲಿಂಕ್ ಮಾಡಿಕೊಳ್ಳಬೇಕು.
ಬಹುತೇಕ ಅನಿವಾಸಿ ಭಾರತೀಯರು, ಭಾರತೀಯ ಮೂಲದವರು ಆಧಾರ್ ಪಡೆಯಲು ಅರ್ಹರಲ್ಲ, ಹೀಗಾಗೀ ಇವರಿಂದ ಆಧಾರ್ ಕೇಳುವ ಸಂದರ್ಭ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಅನುಷ್ಠಾನ ಸಂಸ್ಥೆಗಳು ಈ ಅಂಶವನ್ನು ತಿಳಿದುಕೊಂಡಿರಬೇಕು ಎಂದು ಪ್ರಾಧಿಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.