ನವದೆಹಲಿ: ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವೈದ್ಯರಿಗೆ, ಶಿಕ್ಷಕರಿಗೆ ಮತ್ತು ಧಾರ್ಮಿಕ ಮುಖಂಡರಿಗೆ ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ದಾಧಿಚಿ ದೇಹದಾನಿ ಸಮಿತಿ ಆಯೋಜನೆ ಮಾಡಿದ್ದ ‘ದೇಹದಾನಿಗಳ ಉತ್ಸವ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲೂ ದೇಹದಾನ ಮಾಡಲಾಗುತ್ತಿತ್ತು. ಮಹರ್ಷಿ ದಾಧಿಚಿ ತನ್ನ ದೇಹದ ಮೂಳೆಗಳಿಂದ ದೇವತೆಗಳು ಆಯುಧ ತಯಾರಿಸಲಿ ಎಂಬ ಕಾರಣಕ್ಕೆ ದೇಹ ದಾನ ಮಾಡಿದ್ದರು.
ನಾವು ಜೀವಂತವಾಗಿದ್ದಾಗಲೂ, ಸತ್ತ ಬಳಿಕವೂ ನಮ್ಮ ದೇಹ ಪ್ರಯೋಜನಕಾರಿಯಾಗಿರಬೇಕು, ಇತರ ಮನುಷ್ಯರನ್ನು ಮಾನವೀಯ ನೆಲೆಯಲ್ಲಿ ಆಧರಿಸಬೇಕು ಮತ್ತು ಸ್ಫೂರ್ತಿ ನೀಡಬೇಕು ಎಂದರು.
ಅಂಗಾಂಗಗಳ ಲಭ್ಯತೆ ಇಲ್ಲದೆ ಪ್ರತಿವರ್ಷ 500,000 ಜನರು ನಮ್ಮ ದೇಶದಲ್ಲಿ ಸಾಯುತ್ತಿದ್ದಾರೆ. ಇವರಲ್ಲಿ 200,000 ಮಂದಿ ಲಿವರ್ ವೈಫಲ್ಯದಿಂದ, 50,000 ಜನ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುತ್ತಿದ್ದಾರೆ. 150,000 ಮಂದಿ ಕಿಡ್ನಿ ಕಸಿಗಾಗಿ ಕಾಯುತ್ತಾ ನರಳುತ್ತಾರೆ ಎಂದರು.
ಶಿಕ್ಷಕರು, ವೈದ್ಯರು ಮತ್ತು ಧಾರ್ಮಿಕ ಮುಖಂಡರು ಅಂಗಾಂಗ ದಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.