ಟಿಪ್ಪು ಮತಾಂಧನೋ, ಸ್ವಾತಂತ್ರ್ಯ ಹೋರಾಟಗಾರನೋ, ಸ್ತ್ರೀ ಪೀಡಕನೋ ಎಂಬೆಲ್ಲ ಪ್ರಶ್ನೆಗೆ ನಮಗೆ ಉತ್ತರ ಸಿಕ್ಕಿದ್ದರೂ ಸದ್ಯಕ್ಕೆ ಚುನಾವಣಾ ಪ್ರಣಾಳಿಕೆಯಂತೆ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿರುವ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನು ಬುದ್ದಿಕಲಿಯಲಿಲ್ಲ ಎಂದಾದರೆ ಇದಕ್ಕೆ ಜನಪ್ರತಿನಿಧಿಗಳೇ ಕಾರಣ.
ಕಳೆದ ವರ್ಷದ ಟಿಪ್ಪು ಜಯಂತಿಗೆ ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಎರಡು ಹತ್ಯೆಗಳಾಯಿತು. ಇದರಿಂದಲೇ ತಿಳಿಯುತ್ತದೆ ಸತ್ತ ನಂತರವೂ ಹಿಂದುಗಳ ಪಾಲಿಗೆ ಟಿಪ್ಪು ಮತಾಂಧನೆ ಎಂಬುದು.
ನಮ್ಮ ರಾಜ್ಯದಲ್ಲಿ ಹಲವು ಜಯಂತಿಗಳಾಗುತ್ತದೆ ವಿವಿಧ ಹಬ್ಬದ ಮೆರವಣಿಗೆ ರ್ಯಾಲಿ, ಎಲ್ಲವು ನಡೆಯುತ್ತದೆ ಆದರೆ ಯಾವುದೇ ಹಿಂದೂ ಆಚರಣೆಗಳಲ್ಲಿ ಒಬ್ಬನೇ ಅನ್ಯಧರ್ಮದವನು ಸತ್ತಿರುವ ಉದಾಹರಣೆಯಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ಹನ್ನೆರಡಕ್ಕೂ ಅಧಿಕ ಭಯೋತ್ಪಾದನಾ ದಾಳಿಗಳು, ಹತ್ಯೆಗಳು, ಹತ್ಯಾ ಪ್ರಯತ್ನಗಳು ಹೀಗೆ ಅಲ್ಲಲ್ಲಿ ನಡೆಯುವುದು ಮಾಮೂಲಿಯಾಗಿದೆ. ಇದರ ಬಗ್ಗೆ ಯಾವುದೇ ಸಿನಿಮಾ ನಟರಾಗಲಿ, ಸಾಹಿತಿಗಳಾಗಲಿ ಖಂಡಿಸಿದ್ದು ಇಲ್ಲ. ಯಾಕೆಂದರೆ ಇದು ಯಾವುದೋ ಭಯೋತ್ಪಾದನಾ ಸಂಘಟನೆಗಳಲ್ಲಿ ಅಥವಾ ಲಾಲ್ ಸಲಾಂ ಮಂತ್ರದೊಂದಿಗೆ ಕೈ ಕಾಲು ಕಡಿಯುವ, ಹತ್ಯೆ ಮಾಡುವ ಕಾರ್ಯಕರ್ತರದ್ದಾಗಿರಲಿಲ್ಲ ಬದಲಿಗೆ ಮಾತೃಭೂಮಿಗೆ ತನ್ನ ಅಳಿಲು ಸೇವೆಗೈಯ್ಯುವ ರಾಷ್ಟ್ರೀಯವಾದಿ ಚಿಂತನೆಗಳ ಕುಡಿಗಳಾಗಿತ್ತು ಮತ್ತು ಕಿಡಿಗಳಾಗಿದ್ದವು. ಗುಂಪಿನ ನೋವು ಯಾವುದೇ ಸಾಹಿತಿಗಳು, ಮಾನವತಾವಾದಿಗಳು ಹಾಗು ಚಲನಚಿತ್ರ ನಟರಿಗೆ ಕಾಣುವುದೇ ಇಲ್ಲ.
ಟಿಪ್ಪು ಜಯಂತಿ ಆಚರಣೆಯಿಂದ ಕರ್ನಾಟಕದಲ್ಲಿ ಎರಡು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಹತ್ಯೆ ಮತ್ತು ಹಲವು ಕಾರ್ಯಕರ್ತರ ಮೇಲೆ ಪೊಲೀಸ್ ಕೇಸುಗಳಾದವು, ರಕ್ಷಣೆಗಾಗಿ ಹಲವು ಪೊಲೀಸರಿಗೆ ಕಿರುಕುಳ ಹೆಚ್ಚುವರಿ ಕೆಲಸ, ವಾಹನದ ಅತಿ ಬಳಕೆ ಇವೆಲ್ಲವನ್ನೂ ನೋಡಿದರೆ ಟಿಪ್ಪು ಜಯಂತಿಯಿಂದ ನಷ್ಟವಲ್ಲದೆ ಇನ್ನೇನು ಸಾಧನೆಯಾಯಿತು? ಯಾವುದೇ ಆಚರಣೆಗಳು ಜನರಿಗೆ ಪ್ರೇರಣೆ ಸ್ಫೂರ್ತಿ ಅಥವಾ ಸಂದೇಶ ನೀಡಬೇಕೆ ಹೊರತು ಪಾಕಿಸ್ಥಾನಕ್ಕೆ ಜೈಕಾರ ಹಾಕುವ ಗುಂಪನ್ನು ಅದೆಲ್ಲೋ ಕೇರಳದ ಮೂಲೆಯಿಂದ ತರಿಸಿ ಕರ್ನಾಟಕದಲ್ಲಿ ಘರ್ಷಣೆ ಮಾಡಿಸುವುದೆಂದರೆ ಇದೆಂತಹ ಘನಕಾರ್ಯ ಸರಕಾರದ್ದು?
ಗಾಂಧೀ ಜಯಂತಿಯಲ್ಲಿ ಸ್ವಚ್ಛಮಾಡುವುದನ್ನು ನೋಡಿದ್ದೇವೆ, ಭಗತ್ ಸಿಂಗ್ ಹೆಸರಲ್ಲಿ ರಕ್ತದಾನ, ವೈದ್ಯಕೀಯ ಸೇವೆ, ಅಂಬೇಡ್ಕರ್ ಹೆಸರಲ್ಲಿ ಬಡಬಗ್ಗರಿಗೆ ಸಹಾಯಧನ, ಬಸವ ಜಯಂತಿಗೆ ಸಮಾನತೆಯ ಪಾಠ, ಸ್ವಾಮಿ ವಿವೇಕಾನಂದರ ಜಯಂತಿಗೆ ಮಕ್ಕಳಿಗೆ ಪ್ರೇರಣಾತ್ಮಕ ಆದರ್ಶ ವ್ಯಕ್ತಿಯ ಪರಿಚಯ, ಹೀಗೆ ಹಲವು ಜಯಂತಿಗಳು ಕರ್ನಾಟಕಕ್ಕೇ ಹಲವು ಕೊಡುಗೆಗಳನ್ನು ನೀಡಿದೆ.
ಕೇವಲ ರಾಜಕೀಯ ಉದ್ದೇಶಕ್ಕಾಗಿ ಯಾವುದೇ ಸಂದೇಶವು ಸಮಾಜಕ್ಕೆ ಕೊಡುಗೆಯು ಇಲ್ಲದೆ ಕೊಲೆಗೆ, ಜಗಳಕ್ಕೆ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವಂತಹ ಇದುವರೆಗೆ ಇರದಿದ್ದ ಆಚರಣೆಯನ್ನು ಯಾಕಾಗಿ ತರಲಾಯ್ತು ಎನ್ನುವುದನ್ನು ಸರಕಾರವೇ ಉತ್ತರಿಸಬೇಕಿದೆ. ಮತ್ತು ಎಲ್ಲಾ ಹತ್ಯೆ ಜಗಳಕ್ಕೂ ನೇರ ಸರಕಾರವೇ ಕಾರಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರಹೊಣೆ ಎಂಬುದರಲ್ಲಿ ಸಂದೇಹವಿಲ್ಲ.
ಇನ್ನಾದರೂ ಕೋಮು ಹಿಂಸಾಚಾರಗಳು ನಿಲ್ಲಲಿ. ಶಾಂತಿ ಸೌಹಾರ್ದ ಹಾಗು ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಬೇಕಾದರೆ ಇಂತಹ ಜಯಂತಿಗಳನ್ನು ಸರಕಾರ ನಿಲ್ಲಿಸಲೇ ಬೇಕು. ಟಿಪ್ಪು ಜಯಂತಿ ಆಚರಣೆ ಸರಕಾರದಿಂದ ಎಂಬ ಘೋಷಣೆಯಾದಾಗಲೇ ಮಂಗಳೂರು ಸಹಿತ ವಿವಿಧ ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ ಸಂಘಟನೆಗಳು ಕೂಡ ಈ ಆಚರಣೆಯನ್ನು ವಿರೋಧಿಸಿದ್ದರು.
ಈ ಬಾರಿಯಾದರೂ ಸರಕಾರ ಇದನ್ನು ಗಮನದಲ್ಲಿಟ್ಟುಕೊಂಡು ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವುದನ್ನು ನಿಲ್ಲಿಸಲಿ ಇಲ್ಲದಿದ್ದರೆ ಆಚರಣೆಯ ನಷ್ಟವನ್ನು ಸರಕಾರ ಸ್ವಯಂಪ್ರೇರಿತವಾಗಿ ಭರಿಸಲಿ. ಅಳಿದ ಜೀವವನ್ನು ಕೊಡಲಾಗದಿದ್ದರು ಆ ಜೀವದ ಹತ್ಯೆ ನಾವೇ ಮಾಡಿದ್ದೆಂದು ಸರಕಾರಗಳು ಒಪ್ಪಿಕೊಳ್ಳಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.