ಅಮೃತ್ಸರ: 10 ವರ್ಷಗಳ ಬಳಿಕ ಪಾಕಿಸ್ಥಾನಿ ಸಹೋದರಿಯರಿಬ್ಬರು ಅಮೃತ್ಸರದ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ಭಾರತಕ್ಕೆ ಸೆಲ್ಯೂಟ್ ಎಂದಿದ್ದಾರೆ.
ಪಾಕಿಸ್ಥಾನಿಯರಾದ ಫಾತಿಮಾ ಅವರು ತನ್ನ ಸಹೊದರಿ ಮುಮ್ತಾಝ್ರೊಂದಿಗೆ 10 ವರ್ಷಗಳ ಹಿಂದೆ ಸ್ಮಗ್ಲಿಂಗ್ ಆರೋಪದ ಮೇರೆಗೆ ಬಂಧಿತರಾಗಿದ್ದರು. ಜೈಲಿನಲ್ಲೇ ಅವರು ಹಿನ್ನ ಎಂಬ ಮಗುವಿಗೆ ಜನ್ಮ ನೀಡಿದ್ದರು. ಜೈಲಿನಲ್ಲೇ ಅವರ ಮಗಳು ಬೆಳೆದಿದ್ದಾಳೆ.
ಇದೀಗ ಬಿಡುಗಡೆಗೊಂಡಿರುವ ಅವರು ಅಟ್ಟಾರಿ ಬಾರ್ಡರ್ ಮೂಲಕ ಪಾಕಿಸ್ಥಾನಕ್ಕೆ ತೆರಳುವ ಸಾಧ್ಯತೆ ಇದೆ.
ತಾಯ್ನಾಡು, ಅಪ್ಪನನ್ನು ನೋಡಲು ಕಾತುರಳಾಗಿ ಇರುವುದಾಗಿ ಹಿನ್ನ ಹೇಳಿಕೊಂಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.