ಚೆನ್ನೈ: ಪ್ರಕೃತಿ ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಸಹಾಯಕವಾಗುವಂತಹ ಮಡಚಿಡಬಹುದಾದ ಮನೆಯನ್ನು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ.
4ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗೋಪಿನಾಥ್.ಪಿ, ಶ್ರೀರಾಮ್.ಆರ್, ಅಖಿಲೇಶ್ ಡಿಎಸ್ಎನ್ ಮತ್ತು ಸಂತೋಷ್ ಜಿ.ವಿ ಈ ಮನೆಯನ್ನು ತಯಾರಿಸಿದ್ದಾರೆ.
ವಿದ್ಯಾರ್ಥಿಗಳ ಈ ಅಮೋಘ ಆವಿಷ್ಕಾರಕ್ಕೆ ಅಜೀಂ ಪ್ರೇಮ್ಜೀ ಯೂನಿವರ್ಸಿಟಿಯ ರಾಷ್ಟ್ರ ಮಟ್ಟದ ಸೋಶಲ್ ಎಂಟರ್ಪ್ರೈಸ್ ಐಡಿಯಾ ಚಾಲೆಂಜ್ ಅವಾರ್ಡ್ ದೊರೆತಿದೆ.
2015ರ ಚೆನ್ನೈ ನೆರೆ ಮತ್ತು ವಿಶ್ವದಾದ್ಯಂತ ಕೇಳಿ ಬರುತ್ತಿರುವ ನಿರಾಶ್ರಿತರ ಕೂಗು ಈ ವಿದ್ಯಾರ್ಥಿಗಳಿಗೆ ಇಂತಹ ಮನೆ ವಿನ್ಯಾಸಪಡಿಸಲು ಪ್ರೇರಣೆ ನೀಡಿದೆ.
ಕೇವಲ 15 ನಿಮಿಷದಲ್ಲಿ ಯಾವುದೇ ವ್ಯಕ್ತಿ ಈ ಮನೆಯನ್ನು ಜೋಡಿಸಬಹುದು. ಯಾವುದೇ ಹವಮಾನಕ್ಕೂ ಇದು ಹೊಂದಿಕೆಯಾಗುತ್ತದೆ. ಕೆಲವೇ ನಿಮಿಷದಲ್ಲಿ ಇದು ಮಡಚಿ ಬಾಕ್ಸ್ ಮಾದರಿಗೆ ತರಬಹುದು. ಯಾವುದೇ ಮೂಲೆಗೂ ಇದನ್ನು ತೆಗೆದುಕೊಂಡು ಹೋಗಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.