ನವದೆಹಲಿ: ಬಾರ್ಡರ್ ಪಾಯಿಂಟ್ಗಳಲ್ಲಿ ನಡೆಯುತ್ತಿದ್ದ ಢಾಕಾ-ಕೋಲ್ಕತ್ತಾ ಮೈತ್ರಿ ಎಕ್ಸ್ಪ್ರೆಸ್ ಪ್ರಯಾಣಿಕರ ಇಮಿಗ್ರೇಶನ್ ಮತ್ತು ಕಸ್ಟಮ್ ತಪಾಸಣೆಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಈ ಮೂಲಕ ಪ್ರಯಾಣಕ್ಕೆ ಉಂಟಾಗುತ್ತಿದ್ದ ಅತೀದೊಡ್ಡ ಕಿರಿಕಿರಿ ಅಂತ್ಯವಾಗಲಿದೆ.
ಇನ್ನು ಮುಂದೆ ಬಾರ್ಡರ್ ಪಾಯಿಂಟ್ಗಳಲ್ಲಿ ಇಮಿಗ್ರೇಶನ್, ಕಸ್ಟಮ್ ಚೆಕ್ಗಳು ನಡೆಯುವುದಿಲ್ಲ. ಢಾಕಾ ಕಾಂಟಾನ್ಮೆಂಟ್ ಮತ್ತು ಕೋಲ್ಕತ್ತಾ ಸ್ಟೇಶನ್ಗಳಲ್ಲಿ ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ಮಾತ್ರ ಚೆಕ್ ಮಾಡಲಾಗುತ್ತದೆ ಎಂದು ಭಾರತ ಮತ್ತು ಬಾಂಗ್ಲಾದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದಾಗಿ ಢಾಕಾ ಮತ್ತು ಕೋಲ್ಕತ್ತಾ ನಡುವಣ ಪ್ರಯಾಣ 9 ಗಂಟೆಯಿಂದ 6-7 ಗಂಟೆಗಳಿಗೆ ಇಳಿಕೆಯಾಗಲಿದೆ.
ಇದುವರೆಗೆ ಬಾರ್ಡರ್ ಪಾಯಿಂಟ್ಗಳಾದ ಬಾಂಗ್ಲಾದ ದರ್ಶೊನ ಮತ್ತು ಭಾರತದ ಗೆಡೆಯಲ್ಲಿ ಪ್ರಯಾಣಿಕರ ತಪಾಸಣೆ ನಡೆಯುತ್ತಿತ್ತು. ಪ್ರಯಾಣಿಕರು ಎರಡೂ ಕಡೆ ಲಗೇಜು ಸಮೇತರಾಗಿ ಕೆಳಗಿಳಿದು ತಪಾಸಣೆಗೊಳಪಡಬೇಕಿತ್ತು. ಇದಕ್ಕೆಯೇ 3 ಗಂಟೆ ವ್ಯಯವಾಗುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.