ನವದೆಹಲಿ: ಭಾರತ ಮತ್ತು ಇಟಲಿ ಎಲ್ಲಾ ವಿಧದ ಭಯೋತ್ಪಾದನೆಗಳನ್ನು ಎದುರಿಸಲು ಬದ್ಧವಾಗಿವೆ ಮತ್ತು ಸೈಬರ್ ಸೆಕ್ಯೂರಿಟಿ ಬಲವರ್ಧಿಸುವ ನಿಟ್ಟಿನಲ್ಲಿ ಸಹಕಾರವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತ ಪ್ರವಾಸದಲ್ಲಿರುವ ಇಟಲಿ ಪ್ರಧಾನಿ ಪಾವೊಲೋ ಗೆಂಟಿಲೋನಿಯವರೊಂದಿಗೆ ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ನೀಡಿ ಅವರು ಮಾತನಾಡಿದರು.
‘ಇಂದಿನ ಯುಗದಲ್ಲಿ ಪ್ರತಿನಿತ್ಯ ಹೊಸ ಅಪಾಯ, ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಪ್ರಸ್ತುತ ಇರುವ ಭದ್ರತಾ ಸವಾಲಿಗೆ ಸಂಬಂಧಿಸಿದಂತೆ ಮತ್ತು ಜಾಗತಿಕ ಮಟ್ಟದ ಭದ್ರತೆಗೆ ಸಂಬಂಧಿಸಿದಂತೆ ನಾವು ಚರ್ಚೆ ನಡೆಸಿದ್ದೇವೆ. ಎಲ್ಲಾ ತರನಾದ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮತ್ತು ಸೈಬರ್ ಸೆಕ್ಯೂರಿಟಿ ಸಹಕಾರವನ್ನು ವೃದ್ಧಿಸಲಿದ್ದೇವೆ’ ಎಂದರು.
ಆರ್ಥಿಕವಾಗಿ ಭಾರತ ಮತ್ತು ಇಟಲಿ ಸಾಕಷ್ಟು ಅವಕಾಶಗಳನ್ನು ಹೊಂದಿವೆ. ಈಗಾಗಲೇ ಭಾರತದ ಸಾಕಷ್ಟು ಉದ್ಯಮಿಗಳೊಂದಿಗೆ ಮಾತಯಕತೆ ನಡೆಸಿದ್ದೇವೆ. ಭಾರತದ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲು ಬಯಸುತ್ತೇವೆ ಎಂದು ಪಾವೊಲೋ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.