ನವದೆಹಲಿ: ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಶಸ್ತ್ರಾಸ್ತ್ರ ಪಡೆಗಳ ಸಚಿವೆ ಫ್ಲೊರೆನ್ಸ್ ಪಾಲೆ ಅವರು ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಭಾರತ ಮತ್ತು ಫ್ರೆಂಚ್ ರಾಷ್ಟ್ರಗಳು ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವನ್ನು ವೃದ್ಧಿಸುಕೊಳ್ಳುವ ಭರವಸೆಯನ್ನು ಪರಸ್ಪರ ನೀಡಿವೆ.
ಅಲ್ಲದೇ ಉಭಯ ದೇಶಗಳು ಮುಂದಿನ ವರ್ಷ ಜಂಟಿ ನೌಕಾ ಸಮರಾಭ್ಯಾಸವನ್ನೂ ಹಮ್ಮಿಕೊಳ್ಳಲಿವೆ. ರಕ್ಷಣಾ ಸಚಿವೆ ಸೀತಾರಾಮನ್ ಜೊತೆ ಫ್ಲೊರೆನ್ಸ್ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ.
ಜಂಟಿ ಸಮರಾಭ್ಯಾಸ ಅದರಲ್ಲೂ ವರುಣಾ ನಾವೆಲ್ ಎಕ್ಸ್ರ್ಸೈಸ್ ಮೂಲಕ ಮಿಲಿಟರಿ ಸಹಕಾರ ಹೆಚ್ಚಿಸುವತ್ತ ಉಭಯ ದೇಶಗಳು ಹೆಜ್ಜೆ ಇಟ್ಟಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.