ನವದೆಹಲಿ: ಕಾಶ್ಮೀರದಲ್ಲಿ ಯುವಕರ ಮೂಲಭೂತೀಕರಣ ದೊಡ್ಡ ಸವಾಲಾಗಿದೆ. ಒಂದು ವೇಳೆ ಇದು ಹೆಚ್ಚಾದರೆ ಕಾಶ್ಮೀರದಲ್ಲಿ ಯಮೆನ್, ಸಿರಿಯಾ, ಲಿಬಿಯಾದಂತಹ ಪರಿಸ್ಥಿತಿ ಉದ್ಭವವಾಗಲಿದೆ. ಹೀಗಾಗೀ ಸಮಸ್ಯೆಯಲ್ಲಿರುವ ಕಾಶ್ಮೀರಿಗಳಿಗೆ ನಾವೆಲ್ಲರೂ ಕೊಡುಗೆ ನೀಡುಬೇಕಾದುದು ಅತ್ಯಗತ್ಯ ಎಂದು ಕಾಶ್ಮೀರ ಸಂವಾದದ ನೂತನ ಸಂಧಾನಕಾರ ದಿನೇಶ್ವರ್ ಶರ್ಮಾ ಹೇಳಿದ್ದಾರೆ.
ಕಾಶ್ಮೀರದ ಜನತೆ ಮತ್ತು ಯುವಕರು ತಮಗೆ ಯಾವುದು ಉತ್ತಮ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಕೆಲ ವಿದೇಶಿಗರ ಪ್ರಭಾವಕ್ಕೆ ಮಣಿದು ಕಾರ್ಯನಿರ್ವಹಿಸುತ್ತೀರಾ ಅಥವಾ ನಿಮ್ಮ ಸ್ವಂತ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸುತ್ತೀರಾ ಎಂಬುದನ್ನು ಕಾಶ್ಮೀರಿಗಳಿಗೆ ನಾನು ಮನವರಿಕೆ ಮಾಡಿಕೊಡುತ್ತೇನೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿನ ಶೇ.25ರಷ್ಟು ಜನತೆ 18-29ವಯೋಮಿತಿ ಒಳಗಿನವರು. ಇವರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವತ್ತ ಸರ್ಕಾರ ಪ್ರಯತ್ನ ನಡೆಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.