ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸ ರೇಸ್ ಕೋರ್ಸ್ನಲ್ಲಿ ಭೇಟಿಯಾದರು.
ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಅವರು ಮೋದಿಯನ್ನು ಭೇಟಿಯಾಗಿರುವುದು ಭಾರೀ ಕುತೂಹಲ ಕೆರಳಿಸಿದೆ.
ಸಿಂಗ್ ಅವರು ಔಪಚಾರಿಕವಾಗಿ ಪ್ರಧಾನಿಯವರನ್ನು ಭೇಟಿಯಾದರು ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಡಾ.ಮನಮೋಹನ್ ಸಿಂಗ್ ಜೀ ಅವರನ್ನು ಭೇಟಿಯಾಗಿ ಸಂತಸವಾಯಿತು, ೭ ಆರ್ಸಿಆರ್ಗೆ ಅವರಿಗೆ ಮರು ಸ್ವಾಗತ, ಉತ್ತಮ ಸಮಾಲೋಚನೆ ನಡೆಸಿದೆವು’ ಎಂದಿದ್ದಾರೆ.
‘ಮೋದಿ ಆಹ್ವಾನದ ಮೇರೆಗೆ ಸಿಂಗ್ ಅವರು ಪ್ರಧಾನಿಯವರನ್ನು ಭೇಟಿಯಾದರು, ಇಬ್ಬರು ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ವಿದೇಶಾಂಗ ನೀತಿಯ ಬಗ್ಗೆ ಚರ್ಚೆ ನಡೆಸಿದರು’ ಎಂದು ಮನಮೋಹನ್ ಸಿಂಗ್ ಕಛೇರಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.