ನವದೆಹಲಿ: ಆರ್ಥಿಕ ಮುಗ್ಗಟ್ಟನ್ನು ಎದುರಿಸಲು ಇರುವ ಏಕೈಕ ದಾರಿಯೆಂದರೆ ಅದು ದುಡಿಮೆ. ಹೆಚ್ಚು ಹೆಚ್ಚು ದುಡಿದರೆ ಮಾತ್ರ ಹಣ ಸಂಪಾದಿಸಿ ಕಷ್ಟಗಳಿಂದ ದೂರವಾಗಬಹುದು. ಮಲಯಾಳಂ ಧಾರವಾಹಿಯ ಜನಪ್ರಿಯ ನಟಿಯೊಬ್ಬರೂ ಇದನ್ನೇ ಮಾಡುತ್ತಿದ್ದಾರೆ. ಹಗಲಲ್ಲಿ ನಟಿಯಾಗಿರುವ ಇವರು, ರಾತ್ರಿಯಲ್ಲಿ ಬೀದಿ ಬದಿ ವ್ಯಾಪಾರಿಯಾಗುತ್ತಾರೆ.
ಸ್ತ್ರೀಧಾನಮ್ ಧರವಾಹಿಯಲ್ಲಿ ಶಾಂತ ಪಾತ್ರ ನಿಭಾಯಿಸುತ್ತಿರುವ ಕವಿತಾ ಲಕ್ಷ್ಮೀ ಹಗಲಲ್ಲಿ ನಟನೆ ಮಾಡುತ್ತಾರೆ. ರಾತ್ರಿ ರಸ್ತೆ ಬದಿ ದೋಸೆದ, ಪಕೋಡ ಮುತಾಂದ ತಿಂಡಿಗಳನ್ನು ತಯಾರಿಸಿ ಮಾರುತ್ತಾರೆ.
ಇಬ್ಬರು ಮಕ್ಕಳ ಸಿಂಗಲ್ ಮದರ್ ಆಗಿರುವ ಕವಿತಾ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದು, ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದಾರೆ. ಅದನ್ನು ತೀರಿಸುವ ಸಲುವಾಗಿ ಬಣ್ಣ ಹಚ್ಚುವ ಜೊತೆಗೆ ವ್ಯಾಪಾರವನ್ನು ಮಾಡುತ್ತಿದ್ದಾರೆ. ಅದರಲ್ಲೂ ವಿದೇಶದಲ್ಲಿ ಓದುತ್ತಿರುವ ಮಗನ ಶುಲ್ಕ ಪಾವತಿಸುವ ಸಲುವಾಗಿ ಅವರು ಎರಡೆರಡು ಕಾಯಕವನ್ನು ಮಾಡುತ್ತಿದ್ದಾರೆ.
ಪ್ರಸ್ತುತ ಅವರ ಕೈಯಲ್ಲಿ ಎರಡು ಧಾರವಾಹಿಗಳಿವೆ, ಜೊತೆಗೆ ವ್ಯಾಪರ. ಇದರಿಂದ ಸಂಪಾದಿಸಿದ ಹಣದಿಂದ ಮನೆ ನಡೆಸುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಉನ್ನತ ವ್ಯಾಸಂಗ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.