ಬೆಂಗಳೂರು : ಒಂದಂಕಿ ಲಾಟರಿ ದಂಧೆಗೆ ಸಂಬಂಧ ಪಟ್ಟಂತೆ 23 ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ನಿವೃತ್ತ ಡಿಜಿಪಿ, ಎಡಿಜಿಪಿ ಮತ್ತು ಕರ್ತವ್ಯದಲ್ಲಿರುವ 7 ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಆದರೆ, ಆರೋಪ ಕೇಳಿಬಂದಿರುವ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಕೆಲ ನಿವೃತ ಹಾಗೂ ಹಾಲಿ ಐಪಿಎಸ್ ಅಧಿಕಾರಿಗಳು ಕಾಲಾವಕಾಶ ಕೋರಿದ್ದರು ಎಂದು ಎನ್ನಲಾಗುತ್ತಿದೆ.
ಮಂಗಳವಾರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದರಿಂದ ಪ್ರಸಕ್ತ ಈ ಅಧಿಕಾರಿಗಳಿಗೆ ಕೊಂಚ ರಿಲೀಫ್ ಸಿಕ್ಕಿದೆಯಾದರೂ ಸಿಬಿಐ ತನಿಖೆಯ ತೂಗುಗತ್ತಿ ನೇತಾಡುತ್ತಿದ್ದು ಅದರ ಭಯ ಶುರುವಾಗಿದೆ.
ಪ್ರಸಕ್ತ ತನಿಖೆಯನ್ನು ಸಿಬಿಐಗೆ ವಹಿಸಿರುದರಿಂದ ಈಗಾಗಲೇ ವಿಚಾರಣೆಗೊಳಗಾದ ಅಧಿಕಾರಿಗಳನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿ ಇನ್ನುಳಿದ ಇತರ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಎನ್ನಲಾಗಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹೊಸ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.