ಬೆಳ್ತಂಗಡಿ : ನಾರಾವಿ ಗ್ರಾಮದ ಸೀಗೆದಡಿ (ಮೂಡಾಡಿ) ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯಕಾಮಗಾರಿಗೆ ಶೇಖರಿಸಿಟ್ಟ ಉಪಕರಣಗಳನ್ನು ದೋಚಿರುವ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳ ಕ್ರಮವನ್ನು ಭಾರತಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಳ್ತಂಗಡಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.
ಜನರ ಮೂಲಭೂತ ಅಗತ್ಯಗಳನ್ನು ಒದಗಿಸಲು ಹಲವಾರು ಹೋರಾಟಗಳನ್ನು ನಡೆಸಲಾಗಿದ್ದರೂ ಕೂಡಾ ಸರಕಾರ ನಕ್ಸಲ್ ಪೀಡಿತ ಪ್ರದೇಶಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ದಶಕಗಳ ಹೋರಾಟದ ಬಳಿಕ ಇತ್ತೀಚೆಗೆ ನಬಾರ್ಡ್ಯೋಜನೆಯಡಿ ಸೇತುವೆ ಮಂಜೂರುಗೊಂಡಿತ್ತು. ಈ ಬಗ್ಗೆ ಕಾಮಗಾರಿ ನಿರ್ಮಾಣಕ್ಕಾಗಿಅಗತ್ಯ ಉಪಕರಣಗಳನ್ನು ಶೇಖರಿಸಲಾಗಿತ್ತು.
ಇದೀಗ ಶನಿವಾರ ಮಧ್ಯಾಹ್ನ ಅರಣ್ಯಾಧಿಕಾರಿಗಳು ಈ ಪ್ರದೇಶದಲ್ಲಿ ಶೇಖರಿಸಲಾಗಿದ್ದ ಎಲ್ಲಾ ಸಾಮಾಗ್ರಿಗಳನ್ನು ಗುತ್ತಿಗೆದಾರರಿಗೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ಯಾವುದೇ ಮಾಹಿತಿ ನೀಡದೆ ಎಲ್ಲಾ ಸಾಮಾಗ್ರಿಗಳನ್ನು ಅಲ್ಲಿಂದ ದೋಚಿರುವುದು ಅಭಿವೃದ್ಧಿ ವಿರೋಧಿ ಕ್ರಮವೆಂದು ಟೀಕಿಸಿರುವ ಸಿಪಿಐ(ಎಂ.) ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ರವರು ಕುತ್ಲೂರು ಪ್ರದೇಶದಲ್ಲಿ ಆದಿವಾಸಿಗಳ ಬದುಕಿಗೆ ಕೊಳ್ಳಿ ಇಡುವ ಕೆಲಸದಲ್ಲಿ ಅರಣ್ಯ ಇಲಾಖೆ ನಿರತವಾಗಿದೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ ಎಂಬುದು ಬರೀ ಬೂಟಾಟಿಕೆಯದ್ದು ಎಂದು ಸಾಬೀತಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ, ರಾಜ್ಯ ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣಾ ರಾಜಕೀಯ ನಡೆಸುತ್ತಿದೆ. ರಾಜ್ಯ ಸರಕಾರವೇ ಮಂಜೂರುಗೊಳಿಸಿದ ಕಾಮಗಾರಿಯನ್ನು ನಡೆಸಲು ಅದೇ ರಾಜ್ಯ ಸರಕಾರದಅಡಿಯಲ್ಲಿರುವ ಅಧಿಕಾರಿಗಳು ಅಡ್ಡಿಯುಂಟುಮಾಡುತ್ತಿದ್ದುಇದರಿಂದಾಗಿ ಸರಕಾರಕ್ಕೆ ಅಧಿಕಾರಿಗಳ ಮೇಲೆ ಯಾವುದೇ ಹಿಡಿತವಿಲ್ಲ ಎಂದು ಸಾಬೀತಾಗಿದೆ.
ಅರಣ್ಯಇಲಾಖೆಯ ಈ ನೀತಿಯ ವಿರುದ್ಧ ಮತ್ತು ತಕ್ಷಣ ತಡೆಹಿಡಿಯಲಾದ ಸೇತುವೆ ಕಾಮಗಾರಿಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ಪಕ್ಷದ ನೇತೃತ್ವದಲ್ಲಿ ಮೇ. ೨೫ ರ ಸೋಮವಾರದಿಂದ ಬೆಳ್ತಂಗಡಿ ವನ್ಯಜೀವಿ ಅರಣ್ಯಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.