ನವದೆಹಲಿ: 2019ರ ಮಾರ್ಚ್ನೊಳಗೆ ದೇಶದ 5.5 ಲಕ್ಷ ಗ್ರಾಮಗಳಿಗೆ ವೈಫೈ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 3,700ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸುತ್ತಿದೆ.
‘2019ರ ಮಾರ್ಚ್ನೊಳಗೆ ವೈಫೈ ಸಂಪರ್ಕ ಕಲ್ಪಿಸಲು 2.5 ಲಕ್ಷ ಗ್ರಾಮ ಪಂಚಾಯತಿಗಳಿಗೆ ಟೆಂಡರ್ ಕೊಡುತ್ತೇವೆ. ಇದು ದೊಡ್ಡ ಗುರಿ, ಈ ಎಲ್ಲಾ ಜಿಲ್ಲಾ ಪಂಚಾಯತ್ ವೈಫೈ ಒದಗಿಸುವಲ್ಲಿ ಸಫಲವಾದರೆ 5.5 ಲಕ್ಷ ಹಳ್ಳಿಗಳು ವೈಫೈ ಪಡೆಯಲಿವೆ. ಈ ಮೂಲಕ ಮೊಬೈಲ್ ಬ್ರಾಂಡ್ಬ್ಯಾಂಡ್ಗೆ ಕನೆಕ್ಟ್ ಆಗಲಿವೆ’ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ್ರಾಜನ್ ತಿಳಿಸಿದ್ದಾರೆ.
ಈ ಯೋಜನೆಗೆ ಬರೋಬ್ಬರಿ 3,700 ಕೋಟಿ ವ್ಯಯವಾಗಲಿದೆ. 1 ಲಕ್ಷ ಗ್ರಾಮ ಪಂಚಾಯತಿಗಳಲ್ಲಿ ಈ ವರ್ಷದ ಅಂತ್ಯದೊಳಗೆ 1 ಸೆಕಂಡಿಗೆ 1,000 ಮೆಗಾಬೈಟ್ ನೀಡಲು ನಿರ್ಧರಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.