ನವದೆಹಲಿ: ನೋಟು ರದ್ಧತಿಯ ಸಂದರ್ಭದಲ್ಲಿ 13.33 ಲಕ್ಷ ಅಕೌಂಟ್ಗಳಲ್ಲಿ ಜಮೆಯಾದ 2.89 ಲಕ್ಷ ಕೋಟಿ ರೂಪಾಯಿಗಳನ್ನು ಪರಿಶೀಲನೆಗೊಳಪಡಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಸುಮಾರು 9.72 ಲಕ್ಷ ಮಂದಿಯ 13.33 ಲಕ್ಷ ಅಕೌಂಟ್ಗಳಲ್ಲಿ 2.89 ಕೋಟಿ ರೂಪಾಯಿಗಳು ಜಮಾವಣೆಯಾಗಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ಕೇಳಲಾಗುತ್ತದೆ ಎಂದು ಇಲಾಖೆ ಹೇಳಿದೆ.
ಕೇವಲ 3-4 ವಾರಗಳಲ್ಲಿ ಇಷ್ಟೊಂದು ಮೊತ್ತದ ಹಣ ಇವುಗಳಿಗೆ ಜಮೆಯಾಗಿದೆ. ಇದರಲ್ಲಿ ಎಷ್ಟು ಕಾನೂನುಬದ್ಧ ಹಣ, ಎಷ್ಟು ಅಕ್ರಮ ಎಂದು ಪತ್ತೆ ಮಾಡಬೇಕಿದೆ ಎಂದಿದೆ.
ಅಲ್ಲದೇ ತಲಾ 1 ಕೋಟಿ ರೂಪಾಯಿ ಮೊತ್ತದ 1400 ಆಸ್ತಿಗಳ ಆದಾಯ ತೆರಿಗೆಯ ಪರಿಶೀಲನೆಯಲ್ಲಿದೆ. ಇದರ ಮಾಲೀಕರು ಆದಾಯ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.