ಪ್ಲಾಸ್ಟಿಕ್ ತ್ಯಾಜ್ಯದಿಮದ ಮುಕ್ತಿ ಪಡೆಯುವುದು ಸುಲಭದ ವಿಷಯವಲ್ಲ. ಬೇಡ ಬೇಡವೆಂದರೂ ಪ್ಲಾಸ್ಟಿಕ್ ಬಳಕೆ ಅನಿವಾರ್ಯತೆಯ ಹಂತಕ್ಕೆ ತಲುಪಿದೆ. ಇದರಿಂದಾಗಿ ನಿತ್ಯ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಸೃಷ್ಟಿಯಾಗುತ್ತದೆ.
ಪರಿಸರವನ್ನು ಹಾಳು ಮಾಡುವ ಇಂತಹ ಪ್ಲಾಸ್ಟಿಕ್ಗಳನ್ನು ಇತರ ಉಪಯೋಗಗಳಿಗೆ ಬಳಸಿಕೊಳ್ಳುವುದು ಜಾಣ ನಡೆ. ಹೈದರಾಬಾದ್ ಎಂಜಿನಿಯರ್ ಒಬ್ಬರು ಅದೇ ಕಾರ್ಯವನ್ನು ಮಾಡುತ್ತಿದ್ದಾರೆ.
ಸತೀಶ್ ಕುಮಾರ್ 2016ರಿಂದ ಪ್ಲಾಸ್ಟಿಕ್ನ್ನು ಇಂಧನವಾಗಿ ಪರಿವರ್ತಿಸುತ್ತಿದ್ದಾರೆ. ಈ ಮೂಲಕ ಅವರು ಇದುವರೆಗೆ ಒಟ್ಟು 50 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಿದ್ದಾರೆ.
ರಿಸೈಕಲ್ ಮಾಡಲಾಗದ ಪ್ಲಾಸ್ಟಿಕ್ಗಳಿಂದ ಡಿಸೇಲ್, ಅವಿಯೇಶನ್ ಇಂಧನ, ಪೆಟ್ರೋಲ್ಗಳನ್ನು ಇವರು ತಯಾರಿಸುತ್ತಿದ್ದಾರೆ.
ಎಂಜಿನಿಯರಿಂಗ್ ಭಾಷೆಯ ಪ್ಲಾಸ್ಟಿಕ್ ಪ್ಯಾರೋಲಿಸಿಸ್ ಪ್ರಕ್ರಿಯೆಯ ಅನ್ವಯ ಮೊದಲು ಪ್ಲಾಸ್ಟಿಕ್ನ್ನು ವ್ಯಾಕ್ಯೂಂ ವಾತಾವರಣದಲ್ಲಿ ಪರೋಕ್ಷವಾಗಿ ಬಿಸಿಮಾಡಿ, ಬಳಿಕ ಡಿಪೊಲಿಮರೈಝೇಶನ್, ಗ್ಯಾಸ್ಟಿಫಿಕೇಶನ್ಗೆ ಒಳಪಡಿಸಿ, ಕೊನೆಯದಾಗಿ ಕಾಂಡೆನ್ಸೇಶನ್ ಮಾಡುತ್ತಾರೆ.
ಸತೀಶ್ ಅವರ ಪ್ರಕಾರ 500 ಕೆಜಿ ರಿಸೈಕಲ್ ಮಾಡಲಾಗದ ಪ್ಲಾಸ್ಟಿಕ್ಗಳಿಂದ 400ಲೀಟರ್ ಇಂಧನ ಉತ್ಪಾದನೆ ಮಾಡಲು ಸಾಧ್ಯ.
ಪ್ಲಾಸ್ಟಿಕ್ನಿಂದ ಉತ್ಪಾದನೆಯಾಗುವ ಇಂಧನ ಪೆಟ್ರೋಲ್ ರೀತಿಯೇ ಇದ್ದರೂ, ಅದು ನಿಜವಾದ ಪೆಟ್ರೋಲ್ ಆಗಿರುವುದಿಲ್ಲ. ಆದರೂ ಕೆಲವೊಂದಕ್ಕೆ ಈ ಇಂಧನವನ್ನು ಬಳಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.