ಶಾಲೆಗಳು ಮಕ್ಕಳನ್ನು ವಾಸ್ತವಿಕತೆಯಿಂದ ದೂರ ಕೊಂಡುಯ್ಯುತ್ತಿವೆ. ಮಕ್ಕಳಿಗೆ ಬದಕನ್ನು ಕಲಿಸಿಕೊಡದ ಶಾಲೆಗೆ ನಮ್ಮ ಮಗುವನ್ನು ಕಳುಹಿಸುವುದಿಲ್ಲ ಎಂದು ನಿರ್ಧರಿಸಿದ್ದ ಕೇರಳದ ಗೋಪಾಲಕೃಷ್ಣನ್ ಮತ್ತು ವಿಜಯಲಕ್ಷ್ಮೀ ಎಂಬ ಶಿಕ್ಷಕ ದಂಪತಿ 36 ವರ್ಷಗಳ ಹಿಂದೆಯೇ ಸಾರಂಗ್ ಎಂಬ ವಾಸ್ತವಕ್ಕೆ ಹತ್ತಿರವಾದ ಶಾಲೆಯನ್ನು ಸ್ಥಾಪಿಸಿದರು.
ಗಡಿ ಇಲ್ಲದ, ವಾಸ್ತವಕ್ಕೆ ತೀರಾ ಹತ್ತಿರವಾದ, ಸಂಪೂರ್ಣ ಪ್ರಜಾಪ್ರಭುತ್ವದ ಸಾರಂಗ್ ಪ್ರಕೃತಿಯೊಂದಿಗೆ ಬೆರೆತು ಕಲಿಯುವ ಪಾಠಶಾಲೆ. ಇಲ್ಲಿ ಸರ್ಟಿಫಿಕೇಟ್ ಇಲ್ಲ, ಅಂಕ ಪಡೆಯುವ ಒತ್ತಡವಿಲ್ಲ. ವಿದ್ಯಾರ್ಥಿ ಸ್ವತಂತ್ರವಾಗಿ ಯೋಚಿಸುವ, ನಡೆದುಕೊಳ್ಳುವ ಕೌಶಲವನ್ನು ಬೆಳೆಸುತ್ತಾನೆ.
ತಮ್ಮ ಮಗ ಗೌತಮ್ನನ್ನು ಸಾರಂಗ್ನಲ್ಲಿ ಬೆಳೆಸಿದ ದಂಪತಿ ಬಳಿಕ ತಮ್ಮ ಸಂಬಂಧಿಕರ, ನೆರೆಹೊರೆಯ ಮಕ್ಕಳನ್ನು ಅವರ ಇಚ್ಛೆಯಂತೆ ಸೇರಿಸಿಕೊಂಡರು. 1994ರಲ್ಲಿ ಉದ್ಯೋಗ ತೊರೆದು ಸಾರಂಗ್ಗೆ ಬದುಕು ಮುಡಿಪಾಗಿಟ್ಟ ದಂಪತಿ, ಕರಿ ಹಲಗೆಯ ಬದಲು ವಿಶಾಲ ನೆಲದಲ್ಲಿ ಮಕ್ಕಳಿಗೆ ಕಲಿಸಿದರು.
ಪಲ್ಲಕಾಡ್ನ ಅಟ್ಟಪಾಡಿಯ ಬೆಟ್ಟದಲ್ಲಿ ಸಾರಂಗ್ ಇದ್ದು, ಇಲ್ಲಿ ಮರಗಳು ನಾಶವಾಗಿ, ತೊರೆಗಳು ಬತ್ತಿವೆ. ಆದರೆ ಬದುಕು ಮತ್ತು ಉಳಿವನ್ನು ಕಲಿಯಲು ಮಕ್ಕಳಿಗಿದು ಅತ್ಯದ್ಭುತ ತಾಣವಾಗಿದೆ. ಇಲ್ಲಿನ ಹಲವಾರು ಎಕರೆ ಭೂಮಿಯಲ್ಲಿ ಅರಣ್ಯವನ್ನು ಬೆಳೆಸಿದ ದಂಪತಿ, ಮಣ್ಣು ಮತ್ತು ಬಿದಿರನ್ನು ಬಳಸಿ ಮನೆಗಳನ್ನು ನಿರ್ಮಿಸಿದರು. ಮಣ್ಣಿನ ಸವೆತವನ್ನು ತಡೆಗಟ್ಟಲು ನೈಸರ್ಗಿಕ ಕ್ರಮ ಅನುಸರಿಸಿದರು. ಇದರಿಂದ ಮಕ್ಕಳು ನ್ಯಸರ್ಗಿಕ ವಾಸ್ತುಶಿಲ್ಪ, ಚೆಕ್ ಡ್ಯಾಂ ನಿರ್ಮಾಣ ಹೀಗೆ ಎಲ್ಲವನ್ನೂ ಇಲ್ಲಿನ ಮಕ್ಕಳು ಕಲಿತಿದ್ದಾರೆ.
ಇದೀಗ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿದೆ. ಬಿದಿರು, ಮಣ್ಣುಗಳಿಂದ ಮಕ್ಕಳು ಮನೆ ನಿರ್ಮಾಣ ಕಲಿತಿದ್ದಾರೆ. ಅವರಿಗೆ ಸಂವಹನ ಕಲೆ, ಭಾಷೆ ಎಲ್ಲವನ್ನೂ ಇಲ್ಲಿ ಕಲಿಸಲಾಗಿದೆ. ವಿವಿಧ ಪಕ್ಷಿ, ಪ್ರಾಣಿಗಳ ಪ್ರಬೇಧಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. 12 ಎಕರೆ ಅರಣ್ಯವನ್ನು ಬೆಳೆಸುವ ಮೂಲಕ ಬದುಕಿನ ಎಲ್ಲಾ ಕಲೆಗಳನ್ನು, ಹೆಚ್ಚಾಗಿ ವಾಸ್ತವಿಕ ಶಿಕ್ಷಣವನ್ನು ಇಲ್ಲಿ ಕಲಿತ ಮಕ್ಕಳು ಪಡೆದುಕೊಂಡಿದ್ದಾರೆ.
ಒಟ್ಟು 50 ಮಂದಿ ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ. ಇಂದು ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ. ಇದೀಗ ದಂಪತಿಯ ಮಗ ಗೌತಮ್ ಸಾರಂಗ್ನ್ನು ಮುನ್ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.