ನವದೆಹಲಿ: ತೀವ್ರ ಹೃದಯ ಬೇನೆಯಿಂದ ಬಳಲುತ್ತಿದ್ದ ಆಗ್ರಾದ ಬಾಲಕಿಯೊಬ್ಬಳು ತನ್ನ ಚಿಕಿತ್ಸೆಗಾಗಿ ತಂದೆ ಕಷ್ಟಪಡುವುದನ್ನು ನೋಡಲಾರದೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಅವರಿಂದ ಸಹಾಯ ಪಡೆದುಕೊಂಡಿದ್ದಾಳೆ.
12 ವರ್ಷದ ತೈಯಬಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ, ಅವಳ ಚಿಕಿತ್ಸೆಗೆ 15-20 ಲಕ್ಷ ಬೇಕೆಂದು ವೈದ್ಯರು ಹೇಳಿದ್ದಾರೆ. ಆದರೆ ಕೂಲಿ ಕೆಲಸ ಮಾಡುವ ಅವಳ ತಂದೆಗೆ ಇದು ಸಾಧ್ಯವಿಲ್ಲದ ಮಾತು. ಆದರೂ ಕಷ್ಟಪಟ್ಟು ತನ್ನ ಮಗಳ ಚಿಕಿತ್ಸೆಗೆ ಹೆಣಗಾಡುತ್ತಿದ್ದರು.
ತನ್ನ ತಂದೆಯ ಕಷ್ಟವನ್ನು ನೋಡಲಾಗದ ಬಾಲಕಿ ಎಲ್ಲರಿಗೂ ಸಹಾಯ ಮಾಡುವ ಮೋದಿ ತನಗೂ ಸಹಾಯ ಮಾಡುತ್ತಾರೆ ಎಂಬ ಆಸೆಯಿಂದ ಪತ್ರ ಬರೆದಿದ್ದಾಳೆ. ಕೂಡಲೇ ಸ್ಪಂದಿಸಿದ ಪ್ರಧಾನಿ ಸಚಿವಾಲಯ ಆಕೆಗೆ ವಾಪಾಸ್ ಪತ್ರ ಬರೆದು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದೆ. ಅಲ್ಲದೇ ಆಕೆಯ ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ.
ಮೋದಿ ಕಾರ್ಯಾಲಯದ ಆದೇಶದಂತೆ ದೆಹಲಿ ಸರ್ಕಾರ ತೈಯಬಾ ಚಿಕಿತ್ಸೆಗೆ ದೆಹಲಿಯ ಜಿ.ಬಿ.ಪಂಥ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಿದೆ.
‘ತನ್ನ ಮಗಳ ಪತ್ರಕ್ಕೆ ಇಷ್ಟು ಬೇಗ ಸ್ಪಂದಿಸಿ ವ್ಯವಸ್ಥೆ ಕಲ್ಪಿಸಿದ ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದು ತೈಯಬಾ ತಂದೆ ಹೇಳಿಕೊಂಡಿದ್ದಾರೆ.
ಇಡೀ ದೇಶದ ಜವಾಬ್ದಾರಿಯನ್ನು ಹೊತ್ತಿದ್ದರೂ ಹೆಣ್ಣು ಮಗಳೊಬ್ಬಳ ಸಮಸ್ಯೆಯನ್ನು ಆಲಿಸಿ ಕೂಡಲೇ ಸ್ಪಂದಿಸಿರುವ ಪ್ರಧಾನಿಯವರ ವಿನಂಬ್ರತೆ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.