ನವದೆಹಲಿ: ಮೊಣಕಾಲು ಕಸಿ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭಾರೀ ಇಳಿಕೆ ಮಾಡಿದೆ, ಇದರಿಂದಾಗಿ ಈ ಚಿಕಿತ್ಸೆಗೆ ಒಳಪಡಲಿರುವ ರೋಗಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿನ ತನ್ನ ಭಾಷಣದಲ್ಲಿ ಮೊಣಕಾಲು ಕಸಿ ಚಿಕಿತ್ಸೆ ಬೆಲೆ ಇಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಅದರಂತೆ ನ್ಯಾಷನಲ್ ಫಾರ್ಮಸಿಟಿಕಲ್ ಪ್ರೈಸಿಂಗ್ ಅಥಾರಿಟಿ(ಎನ್ಪಿಪಿಎ) ಮೊಣಕಾಲು ಕಸಿಗೆ ತಗಲುವ ವೆಚ್ಚವನ್ನು ರೂ.54,720ಕ್ಕೆ ನಿಗದಿಪಡಿಸಿದೆ.
ಈ ಹಿಂದೆ ಈ ಚಿಕಿತ್ಸೆಗೆ ರೂ.1.58 ಲಕ್ಷ ರೂಪಾಯಿಗಳಿಂದ ರೂ.2.5 ಲಕ್ಷ ರೂಪಾಯಿಗಳು ತಗಲುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.