ನವದೆಹಲಿ: ಶೌರ್ಯ ಪ್ರಶಸಿ ವಿಜೇತರಿಗೆ ಅರ್ಪಣೆ ಮಾಡಿರುವ ಆನ್ಲೈನ್ ಪೋರ್ಟಲ್ ‘http://gallantryawards.gov.in.’ನ್ನು ಬುಧವಾರ ಲೋಕಾರ್ಪಣೆ ಮಾಡಲಾಗಿದೆ.
ಸ್ವಾತಂತ್ರ್ಯ ದೊರೆತಾಗಿನಿಂದ ಇದುವರೆಗೆ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಆಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರಗಳನ್ನು ಗೆದ್ದುಕೊಂಡಿರುವ ಪ್ರತಿಯೊಬ್ಬರ ಬಗೆಗೂ ಈ ವೆಬ್ಸೈಟ್ನಲ್ಲಿ ಮಾಹಿತಿಗಳು ಇರಲಿವೆ.
ಶೌರ್ಯ ಪ್ರಶಸ್ತಿ ವಿಜೇತರ ಹೆಸರು, ಯುನಿಟ್, ವರ್ಷ, ಉಲ್ಲೇಖ, ಫೊಟೋಗ್ರಾಪ್ಗಳನ್ನು ಇದು ಒಳಗೊಂಡಿದೆ. ಈ ಪೋರ್ಟಲ್ನ್ನು ಇನ್ನಷ್ಟು ಸುಧಾರಿಸಲು ರಕ್ಷಣಾ ಸಚಿವಾಲಯ ಜನರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.