ಡಮಾಸ್ಕಸ್: ಮಧ್ಯ ಸಿರಿಯಾದಲ್ಲಿನ ಪಾಲ್ಮೈರಾ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಅಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಇದು ವಿಶ್ವ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ.
‘ಪಾಲ್ಮೈರಾ ಮಾನವ ನಾಗರಿಕತೆಯ ಜನ್ಮ ತಾಣವಾಗಿದ್ದು, ಅದು ಇಡೀ ಮನುಕುಲಕ್ಕೆ ಸೇರಿದ್ದಾಗಿದೆ. ಅಲ್ಲಿನ ಸದ್ಯದ ಬೆಳವಣಿಗೆಯ ಬಗ್ಗೆ ಎಲ್ಲರಲ್ಲೂ ಆತಂಕ ಮೂಡಿಸಿದೆ. ಪಾಲ್ಮೈರಾವನ್ನು ರಕ್ಷಿಸಲು ವಿಶ್ವವೇ ಒಂದಾಗಿ ಉಗ್ರರನ್ನು ಸದೆ ಬಡಿಯ ಬೇಕಿದೆ’ ಎಂದು ಯುನೆಸ್ಕೋ ಮುಖ್ಯಸ್ಥ ಇರಿನಾ ಬೊಕೊಯ ತಿಳಿಸಿದ್ದಾರೆ.
ಗುರುವಾರ ಇಸಿಸ್ ಉಗ್ರರು ಪಲ್ಮೈರಾ ನಗರವನ್ನು ವಶಪಡಿಸಿಕೊಂಡಿದ್ದಾರೆ. ಇರಾಕ್ನಲ್ಲಿರುವ ಪಾರಂಪರಿಕ ಸ್ಮಾರಕಗಳನ್ನು ನಾಶ ಮಾಡಿದ ರೀತಿಯಲ್ಲಿಯೇ ಪಲ್ಮೈರಾ ಸ್ಮಾರಕಗಳನ್ನೂ ಇವರು ಧ್ವಂಸಗೊಳಿಸಬಹುದು ಎಂಬ ಭೀತಿ ಎದುರಾಗಿದೆ.
ಪಲ್ಮೈರಾ ನಗರ ಉಗ್ರರ ವಶವಾಗುತ್ತಿದ್ದಂತೆಯೇ ಸಿರಿಯಾ ಯೋಧರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.