ಬಾಲ್ಯದಲ್ಲಿನ ಕಿತ್ತು ತಿನ್ನುವ ಬಡತನದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕೊಯಂಬತ್ತೂರಿನ ಆಟೋಡ್ರೈವರ್ ಇಂದು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ತನ್ನಂತೆ ಬಡತನದ ಕಾರಣದಿಂದ ಯಾರೂ ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ಅವರು ಉದ್ದೇಶ.
ರಾಜ ಸೇತಿ ಮುರಳಿ ಕೊಯಂಬತ್ತೂರಿನಲ್ಲಿ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ತಮಗೆ ಬರುವ ಅಲ್ಪ ಆದಾಯದಿಂದಲೇ ಅವರು 1,300 ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಈ ಸಮಾಜಿಕ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದಾರೆ.
ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಕೆಲವೊಂದು ಸರ್ಕಾರಿ ಶಾಲೆಗಳಿಗೆ ತೆರಳುವ ಮುರಳಿ, ಅಲ್ಲಿನ ಶಿಕ್ಷಕರಿಂದ ಬಡ ಮಕ್ಕಳ ಪಟ್ಟಿ ತೆಗೆದುಕೊಳ್ಳುತ್ತಾರೆ. ಬಳಿಕ ಆ ಮಕ್ಕಳಿಗೆ ಬ್ಯಾಗ್, ಪುಸ್ತಕ, ಲಂಚ್ ಬಾಕ್ಸ್ ಇತ್ಯಾದಿಗಳನ್ನು ತೆಗೆದುಕೊಡುತ್ತಾರೆ. ಪ್ರತಿಯೊಬ್ಬರಿಗೂ ತಲಾ 1,700ರೂ ವ್ಯಯಿಸುತ್ತಾರೆ. ಅದೆಲ್ಲವನ್ನೂ ತಮ್ಮ ಆದಾಯದಿಂದಲೇ ಭರಿಸುತ್ತಾರೆ.
ನನ್ನ ಕುಟುಂಬವೆಂದರೆ ಅದು ತಾಯಿಯೊಬ್ಬರೆ ಹೀಗಾಗೀ ಅಷ್ಟಾಗಿ ಖರ್ಚು ಆಗುವುದಿಲ್ಲ. ಕುನಿಯಮುತ್ತೂರಿನಲ್ಲಿ ಆಸ್ತಿ ಇದ್ದು ಅದರ ಬಾಡಿಗೆಯಿಂದ ಮನೆ ನಿರ್ವಹಣೆಯಾಗುತ್ತದೆ ಎಂದು ಮನುರಳಿ ಹೇಳುತ್ತಾರೆ.
ಬಾಲ್ಯದಲ್ಲಿ ಇವರ ತಂದೆ ಕುಡಿತದ ಚಟ ಅಂಟಿಸಿಕೊಂಡಿದ್ದು, ತಾಯಿಯೊಬ್ಬರೇ ದುಡಿದು ಸಾಕಿದ್ದರು. ಹೀಗಾಗೀ ಶೀಕ್ಷಣ ಪಡೆಯುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೀಗ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಭವಿಷ್ಯದಲ್ಲಿ ಶಿಕ್ಷಿತ ಪ್ರಜೆಗಳನ್ನು ರೂಪಿಸುವ ಕಾಯಕ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.