ಮಂಗಳೂರು: ಜಯಕಿರಣ ಫಿಲ್ಮ್ ಬ್ಯಾನರ್ನಡಿ ನಿರ್ಮಿಸಿದ ತುಳು ಹಾಸ್ಯಚಿತ್ರ ಚಾಲಿಪೋಲಿಲು ಯಶಸ್ವಿಯಾಗಿ 200 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರಿನ 92.7ಬಿಗ್ ಎಫ್ಎಂ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು.
ಕೇಕ್ ಕತ್ತರಿಸುವ ಮೂಲಕ ಸಮಾರಂಭದಲ್ಲಿ ಮಾತನಾಡಿದ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್, ತುಳು ಬರಹಗಾರರು, ನಾಟಕಕಾರರ ಸತತ ಶ್ರಮದಿಂದ ತುಳು ಭಾಷೆಯ ಜೀವಂತಿಕೆ ಹೆಚ್ಚಿದೆ. ತುಳು ಸಿನಿಮಾರಂಗದಲ್ಲಿ ಚಾಲಿಪೋಲಿಲು ಸಿನಿಮಾ 200 ದಿನಗಳನ್ನು ಪೂರೈಸಿ ದಾಖಲೆ ನಿರ್ಮಿಸಿದೆ. ಭಾಷೆ ತಿಳಿದಿಲ್ಲದವರೂ ಚಿತ್ರನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತುಳು ಭಾಷೆ ಹೆಗ್ಗಳಿಕೆ ಪಡೆದುಕೊಂಡಿರುವುದರ ಸಂಕೇತ. ಕರಾವಳಿಗೆ ಸೀಮಿತವಾಗದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾದ ಜನಪ್ರಿಯತೆ ಪಸರಿಸುತ್ತಿರುವ ಮೂಲಕ ತುಳುವಿಗೆ ಉತ್ತಮ ವೇದಿಕೆ ಸಜ್ಜಾಗುತ್ತಿದೆ ಎನ್ನುವ ಸಂದೇಶ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ, ಚಿತ್ರ ಎಲ್ಲಾ ಭಾಷೆಯ ಜನರಿಗೂ ಮೆಚ್ಚುಗೆಯಾಗಿದ್ದು ಬಹುದೊಡ್ಡ ಸಂಗತಿ. ನಿರೀಕ್ಷೆಗೂ ಮೀರಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿರುವುದು ತುಳು ಕಲಾಭಿಮಾನಿಗಳಿಂದ ಸಾಧ್ಯವಾಗಿದೆ ಎಂದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಮೇ೨೨ರಿಂದ ಪ್ರಭಾತ್ ಚಿತ್ರಮಂದಿರ ಹಾಗೂ ಮೇ೨೭ರಂದು ಬಹರೈನ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಬಿಗ್ಎಫ್ಎಂನ ಸಿಬ್ಬಂದಿಗಳಾದ ಶಿಲ್ಪ, ಜೋಯೆಲ್, ರಾಕೇಶ್, ಕಿರಣ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.