ಆಗ್ರಾ: ತನ್ನನ್ನು ನೋಡಿ ಕಣ್ಸನ್ನೆ ಮಾಡಿ ಅಸಭ್ಯವಾಗಿ ವ್ಯವಹರಿಸಿದ ಸಮಾಜವಾದಿ ಪಕ್ಷದ ಮುಖಂಡನೊಬ್ಬನ ಗನ್ಮ್ಯಾನ್ ವಿರುದ್ಧ ತಿರುಗಿ ಬಿದ್ದ ಮಹಿಳೆಯೊಬ್ಬಳು ನಡು ರಸ್ತೆಯಲ್ಲೇ ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.
ಸಾಧ್ವಿ ಪಾಂಡೆ ಮತ್ತು ಅವರ ಸಹೋದರಿ ವೈದ್ಯರ ಬಳಿಗೆಂದು ಸ್ಕೂಟರ್ನಲ್ಲಿ ಆಗಮಿಸಿದ್ದಾರೆ. ಈ ವೇಳೆ ಟ್ರಾಫಿಕ್ ಜಾಮ್ ಸಂಭವಿಸಿದೆ. ಈ ವೇಳೆ ಇವರ ಸ್ಕೂಟರ್ ಪಕ್ಕದಲ್ಲೇ ಸಮಾಜವಾದಿ ಮುಖಂಡ ಅಭಿನವ್ ಶರ್ಮಾ ಅವರ ಕಾರೂ ನಿಂತಿತ್ತು. ಅದೇ ಕಾರಿನಲ್ಲಿದ್ದ ಅವರ ಗನ್ಮ್ಯಾನ್ ಸಾಧ್ವಿಗೆ ಕೆಟ್ಟದಾಗಿ ಕಣ್ಸನೆ ಮಾಡಿದ್ದೇ ತಡ ಇಡೀ ವಾತಾವರಣವೇ ಅಲ್ಲೋಲ ಕಲ್ಲೋಲವಾಗಿದೆ.
ನೇರ ಹೋಗಿ ಆತನಿದ್ದ ಮರ್ಸಿಡಿಸಿ ಬೆನ್ಸ್ ಕಾರ್ ಮೇಲೆ ಹತ್ತಿದ ದಿಟ್ಟೆ ಸಾಧ್ವಿ ಆತನನ್ನು ಹೊರಕ್ಕೆ ಎಳೆದು ಹಾಕಲು ಪ್ರಯತ್ನಿಸಿದ್ದಾರೆ. ಆ ಕಾರಿನಲ್ಲಿದ್ದ ಸಮಾಜವಾದಿ ಪಕ್ಷದ ಧ್ವಜವನ್ನು ಕಿತ್ತು ಅದರ ಮೂಲಕವೇ ಕಾರಿನ ಗ್ಲಾಸ್ ಒಡೆದಿದ್ದಾರೆ. ಕಾರಿನಲ್ಲಿದ್ದವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೂ ಆಕೆ ಮಾತ್ರ ಜಗ್ಗಲಿಲ್ಲ. ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಲೂ ಮುಂದಾದರಾದರೂ ಜನಜಂಗುಳಿ ನೆರೆದಿದ್ದರಿಂದ ಭಯಗೊಂಡು ಸುಮ್ಮನಾದರೂ.
ಘಟನೆಯಲ್ಲಿ ಸಾಧ್ವಿ ಮೊಬೈಲ್ ಡ್ಯಾಮೇಜ್ ಆಗಿದೆ, ಇದರ ಮೊತ್ತವನ್ನು ನನಗೆ ನೀಡಬೇಕು ಮತ್ತು ಕೆಟ್ಟದಾಗಿ ವರ್ತಿಸದಕ್ಕೆ ಕ್ಷಮೆ ಕೇಳಬೇಕೆಂದು ಸಾಧ್ವಿ ಪಟ್ಟು ಹಿಡಿದರು. ಕೊನೆಗೆ ಕ್ಷಮೆ ಯಾಚನೆ ಮಾಡಿ, ರೂ.೬,೫೦೦ನ್ನು ಕೊಟ್ಟು ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.
ಅದೇನೆಯಿರಲಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದವನನ್ನು ನಡು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸಾಧ್ವಿ ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.