ದಲೋರಿ: ನೈಜೀರಿಯಾದಲ್ಲಿ ಬೋಕೋ ಹರಾಮ್ ಉಗ್ರರಿಂದ ಅಪಹರಣಕ್ಕೊಳಗಾದ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳಿಯ ಜನರ ಮೇಲೆ ಪ್ರಭುತ್ವವನ್ನು ಸಾಧಿಸಲು ಮತ್ತು ತನ್ನದೇ ಹೊಸ ಇಸ್ಲಾಮಿಕ್ ಉಗ್ರರ ವಂಶವನ್ನು ಬೆಳೆಸುವ ಸಲುವಾಗಿ ಬೋಕೋ ಹರಾಮ್ ಉಗ್ರರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎನ್ನಲಾಗಿದೆ.
ತನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಉಗ್ರರು ಅತ್ಯಾಚಾರ ಎಸಗಿದರು, ಗರ್ಭಧರಿಸುವಂತೆ ಮಾಡುವುದೇ ಅವರ ಪ್ರಮುಖ ಗುರಿಯಾಗಿತ್ತು ಎಂದು ಅಪಹಣರಕ್ಕೊಳಗಾದ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ. ಇಂತಹ ಅನುಭವವನ್ನು ನೂರಾರು ಮಹಿಳೆಯರು ಹೇಳಿಕೊಂಡಿದ್ದಾರೆ.
ಉಗ್ರರಿಂದ ಕಾಪಾಡಲ್ಪಟ್ಟ ಮಹಿಳೆಯರು ನೈಜೀರಿಯಾದ ರಾಜಧಾನಿಯಲ್ಲಿ ಸೇನೆಯ ರಕ್ಷಣೆಯೊಂದಿಗೆ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಗರ್ಭಿಣಿಯರು ಎಂದು ಹೇಳಲಾಗಿದೆ.
ತಮ್ಮ ಉಗ್ರ ವಂಶವನ್ನು ಬೆಳೆಸುವುದಕ್ಕಾಗಿಯೇ ಮಹಿಳೆಯರನ್ನು ಬೋಕೋ ಹರಾಮ್ ಉಗ್ರರು ಬಲಿಪಶುಗಳನ್ನಾಗಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.