ಬಂಟ್ವಾಳ : ಜುಲೈ 11 ರಂದು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರ ಜನ್ಮದಿನ. ರಾಜೇಶ್ ನಾಯ್ಕ್ ಅವರ ಅಭಿಮಾನಿಗಳು ಅವರ ಜನ್ಮದಿನಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಶುಭಕೋರಲು ಯೋಚಿಸಿದ್ದರು. ಇದನ್ನು ತಿಳಿದ ಅವರು ಅಭಿಮಾನಿಗಳಿಗೆ ತಮ್ಮ ಜನ್ಮದಿನಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಡುವ ಬದಲು ಅದೇ ಮೊತ್ತವನ್ನು ನೊಂದ ಶರತ್ ಮಡಿವಾಳ ಕುಟುಂಬಕ್ಕೆ ನೀಡಲು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರುಗಳು ತಮ್ಮ ಜನ್ಮದಿನವನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ವೈಭವೋಪೇತವಾಗಿ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ರಾಜೇಶ್ ನಾಯ್ಕ್ ಅವರು ಈ ರೀತಿ ಮಾಡದೆ ನೊಂದ ಕುಟುಂಬಕ್ಕೆ ಸಹಾಯವಾಗುವಂತಹ ಕಾರ್ಯ ಮಾಡಿದ್ದಾರೆ. ಈ ಮೂಲಕ ತನ್ನ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಅಲ್ಲದೇ ಸಾಮಾಜಿಕ, ರಾಜಕೀಯ ಮುಖಂಡನಾಗಿ ಮೇಲ್ಪಂಕ್ತಿಯ ಸಂದೇಶ ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.