ಮಂಗಳೂರು : ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಮಹತ್ವಕಾಂಕ್ಷಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಬ್ಯಾಂಕಿನ ಎಲ್ಲಾ ಗ್ರಾಹಕರಿಗೂ ನೀಡುವರೇ ವಿಶ್ವಕರ್ಮ ಸಹಕಾರ ಬ್ಯಾಂಕ್ ನ್ಯೂ ಇಂಡಿಯಾ ಎಶ್ಯೊರೆನ್ಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯರಾಮ ಕೆ. ನ್ಯೂ ಇಂಡಿಯಾ ಎಶ್ಯೊರೆನ್ಸ್ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪಿ. ಸಂಜಯ ಕುಮಾರ್ ರಾವ್, ಶಾಖಾ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ದೇವಾಡಿಗ ಮತ್ತು ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಡಿ. ಭಾಸ್ಕರ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯ ಈ ಪಾಲಿಸಿಯ ಪ್ರಾರಂಭಿಕ ವಿಮಾ ಕಂತನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವತಃ ಭರಿಸಿ ತನ್ನ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನೀಡುತ್ತದೆ. ೧೮ ವರ್ಷಕ್ಕೆ ಮೇಲ್ಪಟ್ಟ ೭೦ ವರ್ಷದೊಳಗಿನ ಬ್ಯಾಂಕಿನ ಎಲ್ಲಾ ಅರ್ಹ ಸದಸ್ಯರು ರೂ.1,000/- ಕ್ಕಿಂತ ಹೆಚ್ಚು ಉಳಿತಾಯವಿರುವ ಉಳಿತಾಯ ಹಾಗೂ ಚಾಲ್ತಿಖಾತೆದಾರರು ಮತ್ತು ರೂ.10,000/- ಕ್ಕಿಂತ ಹೆಚ್ಚು ಠೇವಣಿದಾರರು ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ನೋಂದಾವಣಿಯನ್ನು ಮಾಡಿಕೊಂಡು ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಹಾಗೆಯೇ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಬಗ್ಗೆ ಆಸಕ್ತ ಗ್ರಾಹಕರು ಸದಸ್ಯರು ರೂ.330/-ನ್ನು ಬ್ಯಾಂಕಿನ ಯಾವುದೇ ಕಛೇರಿಯಲ್ಲಿ ಪಾವತಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಕೇವಲ ರೂ.12/- ವಾರ್ಷಿಕ ಪ್ರೀಮಿಯಂ ಪಾವತಿಸಿದ ಫಲಾನುಭವಿಗಳು ಅಪಘಾತದ ಸಂದರ್ಭದಲ್ಲಿ ಅವರ ವಾರೀಸುದಾರರಿಗೆ ರೂ.೨.೦೦ ಲಕ್ಷದ ವರೆಗೆ ಅಪಘಾತ ವಿಮೆ ದೊರೆಯುತ್ತದೆ. ಅದೇ ರೀತಿ ರೂ.330/- ವಾರ್ಷಿಕ ಪ್ರೀಮಿಯಂನ್ನು ಪಾವತಿಸಿದರೆ ಪ್ರಧಾನಮಂತ್ರಿ ವಿಮಾ ಯೋಜನೆಯಡಿ ರೂ.೨.೦೦ ಲಕ್ಷ ಜೀವ ವಿಮೆ ದೊರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.