ಮಂಗಳೂರು : ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ವತಿಯಿಂದ ಕೇಂದ್ರ ಸರ್ಕಾರದ ಗೋ ಮಾರಾಟ, ವ್ಯಾಪಾರ ನಿರ್ಬಂಧ ಕಾಯ್ದೆ ಜಾರಿಗೊಳಿಸಿದ್ದನ್ನು ಬೆಂಬಲಿಸಿ ಮಂಗಳೂರಿನ ಗೋವನಿತಾಶ್ರಯ ಗೋಶಾಲೆಯಲ್ಲಿ ಟ್ರಸ್ಟಿ ಮತ್ತು ಗೋಸೇವಕರನ್ನು ಗೌರವಿಸುವ ಮೂಲಕ ಬಿಲೀಫ್ ಫೆಸ್ಟ್ ಆಚರಿಸಿತು.
ಯುವಾಬ್ರಿಗೇಡ್ ವಿಭಾಗ ಸಂಚಾಲಕರಾದ ಮಂಜಯ್ಯ ನೇರೆಂಕಿ ಟ್ರಸ್ಟಿನ ಕಾರ್ಯಕಾರ್ಯದರ್ಶಿಗಳಾದ ಡಾ! ಪಿ. ಅನಂತಕೃಷ್ಣ ಭಟ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು ಗೋಮಾತೆ ನಮ್ಮೆಲ್ಲರ ತಾಯಿ ಅದರ ರಕ್ಷಣೆ ನಮ್ಮಲ್ಲರ ಕರ್ತವ್ಯ. ನಮ್ಮ ಸಂಸ್ಥೆಯಲ್ಲಿ ಕಟ್ಟುಕರ ಕತ್ತಿಯಿಂದ ತಪ್ಪಿಸಿಕೊಂಡು ಬಂದಂತಹ 400ಕ್ಕೂ ಗೋವುಗಳು ಆಶ್ರಯ ಪಡೆಯುತ್ತಿವೆ ತಿಂಗಳಗೆ ಸುಮಾರು 5 ಲಕ್ಷದಷ್ಟು ಖರ್ಚು ಬರಿಸಬೇಕಾಗಿದ್ದು ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕಿದೆ. ಯುವಾಬ್ರಿಗೇಡ್ ಜನ ಜಾಗೃತಿಯ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುತ್ತಿದ್ದು, ಗೋಕಥೆ, ಪೃಥ್ವಿಯೋಗ ಕಲ್ಯಾಣಿ ಪುನರುಜ್ಜಿವನ ಮತ್ತಿತರ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಯುವಾಬ್ರಿಗೇಡ್ ಕಾರ್ಯಕರ್ತರು ಗೋಶಾಲೆಯ ಎಲ್ಲಾ ಸಿಬ್ಬಂದಿಗಳಿಗೆ ಶಾಲು ಹೋದಿಸಿ ಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಜಿಲ್ಲಾ ಸಹ ಸಂಚಲಕರಾದ ತಿಲಕ್ ಶಿಶಿಲ ನಗರ ಸಂಚಲಕರಾದ ಸಂಪತ್ ವಿನೋದ್, ಸಂದೇಶ್ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.