1996ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಹಲವಾರು ಸೈನಿಕರು ತಮ್ಮ ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಕೆಲವರು ಶತ್ರುಗಳ ಗುಂಡೇಟಿಗೆ ವಿಕಲಚೇತನರಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಮೇಜರ್ ಡಿ.ಪಿ.ಸಿಂಗ್. ಯುದ್ಧದಲ್ಲಿ ಹೋರಾಡುತ್ತಿದ್ದ ಇವರು ಇಂದು ಬದುಕಿಗಾಗಿ ಹೋರಾಡುತ್ತಿದ್ದಾರೆ. ಎಂದೂ ಸೋಲದ ಹೋರಾಟ ಅವರದ್ದು.
ಕಾರ್ಗಿಲ್ ಯುದ್ಧದ ವೇಳೆ ಇವರ ದೇಹದೊಳಕ್ಕೆ ತೂರಿದ್ದ ಗುಂಡುಗಳು ಇವರನ್ನು ಸಾವಿನ ಸಮೀಪಕ್ಕೆ ಕೊಂಡೊಯ್ದಿತ್ತು. ವೈದ್ಯರು ಇವರನ್ನು ಮೃತ ಎಂದು ಘೋಷಿಸಲು ಸನ್ನದ್ಧರಾಗಿದ್ದರು. ಆದರೆ ಅವರು ಬದುಕಿಗಾಗಿನ ಹೋರಾಟವನ್ನು ಬಿಟ್ಟುಕೊಡದೆ ಸಾವನ್ನೇ ಜಯಿಸಿ ಎದ್ದು ಬಂದರು.
ಆದರೆ ಇವರ ಬಲಗಾಲಿಗೆ ಆದ ಹಾನಿಯನ್ನು ವೈದ್ಯರಿಂದಲು ಸರಿಪಡಿಸಲಾಗಿಲ್ಲ. ಕಾಲನ್ನು ತೆಗೆಯಲೇ ಬೇಕಾಯಿತು. 25 ವರ್ಷ ವಯಸ್ಸಿನ ಅವರು ತಮ್ಮ ಉಳಿದ ಜೀವಮಾನವನ್ನು ಒಂಟಿ ಕಾಲಲ್ಲೇ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಇದನ್ನು ಮತ್ತೊಂದು ಸವಾಲು ಎಂಬಂತೆ ಸ್ವೀಕರಿಸಿದ ಅವರು ಕೃತ ಕಾಲಿನ ನೆರವಿನೊಂದಿಗೆ ಓಡಾಡುವುದನ್ನು ಕಲಿತರು. ಹಾಲ್ಫ್ ಮ್ಯಾರಥಾನ್ಗಳಲ್ಲಿ ಪಾಲ್ಗೊಂಡರು. ಈಗಲೂ ಅವರೊಬ್ಬ ಮ್ಯಾರಥಾನ್ ಪಟು. ಒಲಿಂಪಿಕ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಛಲ ಹೊಂದಿದ್ದಾರೆ.
21 ಕಿಲೋಮೀಟರ್ ಹಾಲ್ಫ್ ಮ್ಯಾರಥಾನ್ ಪೂರೈಸಿದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಅವರು ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಭಾರತದ ಮೊದಲ ಬ್ಲೇಡ್ ರನ್ನರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
‘ದಿ ಚಾಲೆಂಜಿಂಗ್ ಒನ್ಸ್’ ಎಂಬ ಎನ್ಜಿಓ ಮೂಲಕ ಇತರ ವಿಕಲಚೇತನರಿಗೆ ಪ್ರೇರಣೆ ತುಂಬುವ, ನೆರವು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.
‘ಗಾಯಗೊಂಡು ಆಸ್ಪತ್ರೆಯಲ್ಲಿ ಬಿದ್ದಿದ್ದಾಗ ದೇಶದಾದ್ಯಂತದಿಂದ ವಿವಿಧ ಜಾತಿ, ಜನಾಂಗ, ಧರ್ಮಗಳ ಜನರ ರಕ್ತ ನನಗಾಗಿ ಬಂದಿತ್ತು. ಇಡೀ ಭಾರತದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿರುವಾಗ ನನ್ನಿಂದ ಎಲ್ಲವನ್ನೂ ಮಾಡಲು ಸಾಧ್ಯ’ ಎಂದು ಸಿಂಗ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.