ಕೆಲವರ್ಷಗಳ ಹಿಂದೆ ಆಕೆಗೆ ವೈದ್ಯರುಗಳೇ ನಿಮಗಿನ್ನು ನಡೆದಾಡಲು ಸಾಧ್ಯವಿಲ್ಲ ಎಂದಿದ್ದರೂ ಆದರೆ ಇಂದು ಆಕೆ ವಿಶ್ವದ ಅತೀಎತ್ತರದ ಮೌಂಟ್ ಎವರೆಸ್ಟ್ ಹತ್ತಿದ ಕೀರ್ತಿಯನ್ನು ಹೊಂದಿದ್ದಾಳೆ. ಇದಕ್ಕೆಲ್ಲ ಆಕೆಯ ಶ್ರದ್ಧೆ, ಛಲ ಮತ್ತು ಗುರಿಯೇ ಕಾರಣ.
47 ವರ್ಷದ ಅಪರ್ಣಾ ಪ್ರಭು ದೇಸಾಯಿ ತೀವ್ರ ಸ್ವರೂಪದ ಕಾಲಿನ ಮೊಣ ಗಂಟಿನ ತೀವ್ರ ಸಮಸ್ಯೆಗೆ ಒಳಗಾಗಿ ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು, ಮನೆಯೊಳಗೂ ವಾಕರ್ ಅಥವಾ ವ್ಹೀಲ್ ಚೇರ್ ಬಳಸಬೇಕಾದ ಅನಿವಾರ್ಯತೆ ಅವರಿಗಿತ್ತು. ಆದರೆ ಇಂದು ಅವರು ಮೌಂಟ್ ಎವರೆಸ್ಟ್ನ್ನು ಹತ್ತಿ ತೋರಿಸಿದ್ದಾರೆ. ಮಾತ್ರವಲ್ಲದೇ ಉತ್ತರ ಭಾಗದಿಂದ ಎವರೆಸ್ಟ್ ಹತ್ತಿದ ಮಹಾರಾಷ್ಟ್ರದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮೊಣ ಗಂಟಿನ ಸಮಸ್ಯೆಯಿಂದ ೫ ತಿಂಗಳು ವ್ಹೀಲ್ ಚೇರ್ಗೆ ಅಂಟಿಕೊಂಡಿದ್ದ ಅಪರ್ಣಾಗೆ ತಾನು ನಡೆದಾಡಲೇ ಬೇಕೆಂಬ ತೀವ್ರ ಹಠವಿತ್ತು. ಇದನ್ನು ತಮ್ಮ ವೈದ್ಯ ಸಹೋದರನ ಬಳಿ ಹೇಳಿಕೊಂಡಾಗ ಅವರು ನೀಡಿದ್ದು ಒಂದೇ ಒಂದು ಸಲಹೆ, ಅದೇನೆಂದರೆ ಎಲುಬಿನ ಮೇಲೆ ಹಾಕಲ್ಪಟ್ಟ ಭಾರವನ್ನು ಕಡಿಮೆ ಮಾಡುವುದು. ಅದರಂತೆ ಅವರು ಭಾರ ಕಮ್ಮಿ ಮಾಡುವ ಕಾರ್ಯ ಮಾಡಿದರು.
ಮತ್ತೊಂದು ದಿನ ಸ್ನೇಹಿತೆಯೊಬ್ಬರು ಇವರನ್ನು ಧರ್ಮಶಾಲಾದಲ್ಲಿ ಟ್ರಕ್ಕಿಂಗ್ಗೆ ಕರೆದುಕೊಂಡು ಹೋದರು. ಕಾಲಿನಲ್ಲಿದ್ದ ಬ್ರೇಸರ್ ಸಹಾಯದಿಂದ ಇವರು ಟ್ರಕ್ ನಡೆಸಿದರಾದರೂ ಇವರ ಸ್ನೇಹಿತೆಯೇ ಹೆಚ್ಚಿನ ಬಾರಿ ಇವರನ್ನು ಹೊತ್ತೊಯ್ಯಿದರು. ಅಲ್ಲಿಂದ ಬಂದ ಬಳಿಕ ಅಪರ್ಣಾ ಅವರು ಓಡಲು ನಿರ್ಧರಿಸಿದರು. ಬಳಿಕ ಭಾರತ-ವಿದೇಶಗಳಲ್ಲಿ ಮ್ಯಾರಥಾನ್, ಹಾಫ್ ಮ್ಯಾರಥಾನ್ಗಳಲ್ಲಿ ಪಾಲ್ಗೊಂಡರು.
೨೦೧೪ರಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಟ್ರಕ್ಕಿಂಗ್ ನಡೆಸಿದರು. ಬೇಸ್ನಿಂದ ಎವರೆಸ್ಟ್ನ ತುದಿ ನೀಡಿದ ಅವರು. ೨೦೧೭ರಲ್ಲಿ ಅಲ್ಲಿಗೂ ತಲುಪಬೇಕು ಎಂಬ ದೃಢ ಸಂಕಲ್ಪ ಮಾಡಿದರು. ಬಳಿಕ ತರಬೇತಿ, ಮೌಂಟೆನಿಂಗ್ ಕೋರ್ಸುಗಳನ್ನು ಪಡೆದು. ನಿರಂತರ ಅಭ್ಯಾಸ ನಡೆಸಿದರು. ಅದರ ಫಲವಾಗಿ ಇಂದು ಅವರು ಮೌಂಟ್ ಎವರೆಸ್ಟ್ ಏರಿದ ಮಹಿಳೆ ಎಂಬ ಕೀರ್ತಿ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.