ಬಲಸೋರ್: ಭಾರತ ಶುಕ್ರವಾರ ತನ್ನ ಪೃಥ್ವೀ-II ಬ್ಯಾಲೆಸ್ಟಿಕ್ ಮಿಸೆಲ್ನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿವಾಗಿ ಪೂರೈಸಿದೆ.
ಒರಿಸ್ಸಾದ ಬಲಸೋರ್ನ ಚಂಡೀಪುರದಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್)ನಲ್ಲಿ ಇಂದು ಬೆಳಿಗ್ಗೆ 10.56ರ ಸುಮಾರಿಗೆ ಪ್ರಯೋಗಾರ್ಥ ಉಡಾವಣೆಯನ್ನು ನಡೆಸಲಾಗಿದೆ.
ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್(ಡಿಆರ್ಡಿ)) ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್(ಬಿಡಿಎಲ್) ಜಂಟಿಯಾಗಿ ಈ ಮಿಸೈಲ್ನ್ನು ಅಭಿವೃದ್ಧಿಪಡಿಸಿದೆ.
ಮೇಲ್ಮೈಯಿಂದ ಮೇಲ್ಮೈನ ಮಧ್ಯಮ ರೇಂಜ್ನ ಬ್ಯಾಲೆಸ್ಟಿಕ್ ಮಿಸೈಲ್ ಇದಾಗಿದೆ.
1996ರ ಜನವರಿಗೆ 27ರಂದು ಈ ಮಿಸೈಲ್ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು.
ಸಿಂಗಲ್ ಸ್ಟೇಜ್ ಲಿಕ್ವಿಡ್ ಫ್ಯೂಲ್ಡ್ ಪೃಥ್ವೀ-IIನ ಉದ್ದ 8.56 ಮೀಟರ್, ತೂಕ 4,600 ಕಿಲೋಗ್ರಾಂ ಇದೆ. ಅಲ್ಯೂಮೀನಿಯಂ ಮಿಶ್ರಲೋಹದಿಂದ ಇದನ್ನು ಮಾಡಲಾಗಿದೆ. ಇದರ ರೆಕ್ಕೆಗಳು ಮ್ಯಾಗ್ನೇಶಿಯಂನಿಂದ ವಿನ್ಯಾಸಗೊಂಡಿದೆ.
ಭಾರತೀಯ ಸೇನೆಯ 333-ಮಿಸೈಲ್ ರಿಜಿಮೆಂಟ್ಗೆ ಸೇರ್ಪಡೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.