ನವದೆಹಲಿ: ಎರಡನೇ ಸ್ಕಾರ್ಪೆನೆ ಕ್ಲಾಸ್ ಸಬ್ಮರೀನ್ ಮೆಲ್ಮೈ ಸಮುದ್ರ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಸಬ್ಮರೀನ್ ನಿರ್ಮಿಸಿದ ಮಝಗೋನ್ ಡಾಕ್ ಲಿಮಿಟೆಡ್(ಎಂಡಿಎಲ್) ಎಂಜಿನಿಯರ್ಗಳನ್ನು ಅವರು ಅಭಿನಂದಿಸಿದ್ದಾರೆ.
ಮೊದಲ ಸ್ಕಾರ್ಪೆನೆ ಕ್ಲಾಸ್ ಸಬ್ಮರೀನ್ ಐಎನ್ಎಸ್ ಕಲವರಿ ಈಗಾಗಲೇ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದು, ಈ ವರ್ಷದ ಅಂತ್ಯದಲ್ಲಿ ನೌಕೆಗೆ ಸೇರ್ಪಡೆಗೊಳ್ಳಲಿದೆ.
ಸ್ಕಾರ್ಪೆನೆ ಕ್ಲಾಸ್ ಸಬ್ಮರೀನ್ಗಳು ಭಾರತದ ನೌಕಾದಳದ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮಾತ್ರವಲ್ಲದೇ, ನಮ್ಮ ಸಮುದ್ರ ತಟವನ್ನು ಸುರಕ್ಷಿತವಾಗಿಡಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ನೌಕೆಯ ‘ಪ್ರಾಜೆಕ್ಟ್ 75’ ಅಡಿಯಲ್ಲಿ 6 ಸ್ಕಾರ್ಪೆನೆ ಕ್ಲಾಸ್ ಸಬ್ಮರೀನ್ಗಳನ್ನು ನಿರ್ಮಿಸಲಾಗಿದೆ.
ಇವುಗಳನ್ನು ಫ್ರೆಂಚ್ ನಾವೆಲ್ ಡಿಫೆನ್ಸ್ ಆಂಡ್ ಎನರ್ಜಿ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ್ದು, ಮಝಗೋನ್ ಡಾಕ್ ಲಿಮಿಟೆಡ್ ನಿರ್ಮಾಣ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.