ಆಕೆ ಕೈಗಳಿಲ್ಲದೆ ಹುಟ್ಟಿದವಳು, ಆದರೆ ಈ ನ್ಯೂನ್ಯತೆಗೆ ಆಕೆಯನ್ನು ಎತ್ತರಕ್ಕೆ ಹಾರುವ ಭರವಸೆಯಿಂದ, ದೃಢಸಂಕಲ್ಪದಿಂದ ವಿಮುಖಗೊಳಿಸಲು ಸಾಧ್ಯವಾಗಲಿಲ್ಲ.
ಮಹಾರಾಷ್ಟ್ರದ ನಕ್ಸಲ್ ಪೀಡಿತ ಗೊಡ್ಚಿರೋಲಿ ಪ್ರದೇಶದ 17 ವರ್ಷದ ಬಾಲಕಿ ಆಂಚಲ್ ರಾವತ್ಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಎಚ್ಎಸ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡೆಹೊಂದಿದ್ದಾಳೆ. ಮುಂದೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಗುರಿಯನ್ನು ಹೊಂದಿದ್ದಾಳೆ.
ಸಹಾಯಕರನ್ನು ಒದಗಿಸಲಾಗಿದ್ದರೂ ಅದನ್ನು ತಿರಸ್ಕರಿಸಿ ಎಚ್ಎಸ್ಸಿ ಎಕ್ಸಾಂನ್ನು ಕಾಲುಗಳ ಮೂಲಕವೇ ಬರೆದ ಈಕೆ ಶೇ.63ರಷ್ಟು ಅಂಕ ಪಡೆಯಲು ಯಶಸ್ವಿಯಾಗಿದ್ದಾಳೆ. ಆದರೆ ಈ ಅಂಕ ಆಕೆ ಸವೆದು ಬಂದ ಕಷ್ಟಕರ ಹಾದಿಯನ್ನು ವಿವರಿಸೋದಿಲ್ಲ.
ನಕ್ಸಲ್ ಪೀಡಿತವಾದ ಗೊಡ್ಚಿರೋಲಿಯ ಕುರ್ಖೆಡ ಗ್ರಾಮದವಳಾದ ಈಕೆಯ ತಾಯಿ ಕೂಡ ಎರಡೂ ಕೈಗಳಿಲ್ಲದೆ ಹುಟ್ಟಿದವರು. ತಂದೆ ರೈತನಾಗಿದ್ದು ಕುಟುಂಬವನ್ನು ಸರಳವಾಗಿ ನಡೆಸಿಕೊಂಡು ಹೋಗಲು ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ.
೪೦ ನಿಮಿಷಗಳ ಬಸ್ ಪ್ರಯಾಣದ ಮೂಲಕ ಕಾಲೇಜಿಗೆ ಹೋಗುವ ಆಂಚಲ್ ಎಂದೂ ಆತ್ಮವಿಶ್ವಾಸವನ್ನು ಕಳೆದುಕೊಂಡವಳಲ್ಲ. ಕಾಲೇಜಿಗೆ ಸೇರುವಾಗ ಈಕೆ ಹೇಗೆ ಓದುತ್ತಾಳೆ, ಬರೆಯುತ್ತಾಳೆ ಎಂಬ ಚಿಂತಲ್ಲಿದ್ದ ಶಿಕ್ಷಕರೂ ಇಂದು ಅವಳನ್ನು ಕಂಡು ಹೆಮ್ಮೆಪಟ್ಟುಕೊಳ್ಳುತ್ತಾರೆ.
ಪೆನ್ನ್ನು ಕಾಲುಗಳ ಹೆಬ್ಬೆರಳ ಮಧ್ಯೆ ಇಟ್ಟು ಬರೆಯುವ ಈಕೆಯ ಅಕ್ಷರವೂ ಮುದ್ದಾಗಿದೆ, ತುಂಬಾ ನೀಟಾಗಿಯೂ ಬರೆಯುತ್ತಾಳೆ. ಓದುವುದರಲ್ಲೂ ಹಿಂದೆ ಬೀಳದ ಈಕೆ ಕಾಲೇಜಿನ ಎಲ್ಲಾ ಸಮಾರಂಭಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ತನ್ನಿಂದಾದ ಕಾರ್ಯ, ಸಹಾಯ ಮಾಡುತ್ತಾಳೆ. ಇದೀಗ ಆಕೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒರ್ವ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾಳೆ.
ಐಎಎಸ್ ಆಗುವ ಕನಸು ಕಾಣುತ್ತಿರುವ ಈಕೆಗೆ ಕಾಲೇಜು ಶಿಕ್ಷಕ ವೃಂದ ತರಬೇತಿಯನ್ನೂ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.