ತಮ್ಮ ಗ್ರಾಮದ ಹುತಾತ್ಮ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರೆಸ್ಲಿಂಗ್ ರಿಂಗ್ಗೆ ಇಡೀ ಗ್ರಾಮದ ಜನತೆ ಇಟ್ಟಿಗೆ, ಸಿಮೆಂಟ್ ಬ್ಯಾಗ್ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ನಿರ್ಮಾಣ ಕಾರ್ಯದಲ್ಲಿ ವೇತನ ಪಡೆಯದೆ ಭಾಗಿಯಾಗುತ್ತಿದ್ದಾರೆ.
ಹರಿಯಾಣದ ಕರ್ನಲ್ ಜಿಲ್ಲೆಯ ಖೆರಿ ಮನ್ ಸಿಂಗ್ ಗ್ರಾಮಕ್ಕೆ ಸೇರಿದ ಸಿಆರ್ಪಿಎಫ್ ಯೋಧ ರಾಮ್ ಮೆಹರ್ ಅವರು ಇತ್ತೀಚಿಗೆ ಛತ್ತೀಸ್ಗಢದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾಗಿದ್ದರು.
ಇವರು ಕುಸ್ತಿ ಪ್ರಿಯನಾಗಿದ್ದ ಕಾರಣ ಇದೀಗ ಖೆರಿ ಮನ್ ಸಿಂಗ್ ಗ್ರಾಮದ ಜನರು ಒಟ್ಟು ಸೇರಿ ಇವರ ಹೆಸರಲ್ಲಿ ರೆಸ್ಲಿಂಗ್ ರಿಂಗ್ವೊಂದನ್ನು ನಿರ್ಮಿಸುತ್ತಿದ್ದಾರೆ. ಮೆಹರ್ ಅವರ ಕುಟಂಬ ತಮ್ಮ ಒಂದೂವರೆ ಎಕರೆ ಜಾಗವನ್ನು ಇದಕ್ಕಾಗಿ ನೀಡಿದೆ. ಎಲ್ಲಾ ಗ್ರಾಮಸ್ಥರು ತಮ್ಮಿಂದಾದಷ್ಟು ಇಟ್ಟಿಗೆಗಳನ್ನು, ಸಿಮೆಂಟ್ ಬ್ಯಾಗ್ಗಳನ್ನು ಇದಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ.
ಇನ್ನೂ ಕೆಲವರು ವೇತನ ಪಡೆಯದೇ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಗ್ರಾಮದ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಆಖಾರ ರೆಸ್ಲಿಂಗ್ ರಿಂಗ್ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಾರೆ.
ಚಂಡೀಗಢದ ನಿವಾಸಿ ಸಂಜೀವ್ ರಣಾ ಅವರು ಇದರ ನೇತೃತ್ವವನ್ನು ವಹಿಸಿದ್ದು, ‘ಏಕ್ ಈಂಟ್ ಶಹೀದ್ ಕೆ ನಾಮ್'(ಒಂದು ಇಟ್ಟಿಗೆ ಹುತಾತ್ಮನ ಹೆಸರಲ್ಲಿ) ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಕರ್ತವ್ಯದ ವೇಳೆ ಹುತಾತ್ಮನಾದ ಯೋಧನಿಗಾಗಿ ಒಂದು ಇಟ್ಟಿಗೆಯನ್ನಾದರೂ ನೀಡುವಂತೆ ಇವರು ಗ್ರಾಮಸ್ಥರನ್ನು ಹುರಿದುಂಬಿಸುತ್ತಿದ್ದಾರೆ.
‘ಹುತಾತ್ಮರಿಗೆ ಸ್ಮಾರಕ, ಸಂಸ್ಥೆಗಳನ್ನು ನಿರ್ಮಿಸುವಂತೆ ಜನ ಸರ್ಕಾರದ ಹಿಂದೆ ಬೀಳಬಾರದು, ಹುತಾತ್ಮರು ಮೊದಲು ಜನರಿಗೆ ಸಂಬಂಧಪಟ್ಟವರು, ಅವರಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸ್ಮಾರಕಗಳನ್ನು ನಿರ್ಮಿಸಬೇಕು’ ಎಂದು ಸಂಜೀವ್ ಹೇಳುತ್ತಾರೆ.
ಮೆಹರ್ ಅವರು ರೆಸ್ಲಿಂಗ್ ಪ್ರಿಯನಾಗಿದ್ದರು, ಅವರ ಕುಟುಂಬ ಒಂದು ಸಣ್ಣ ರೆಸ್ಲಿಂಗ್ ರಿಂಗ್ ನಡೆಸುತ್ತಿದ್ದು, ದಿನಕ್ಕೆ 50 ಮಂದಿ ಇಲ್ಲಿ ಅಭ್ಯಾಸ ನಡೆಸುತ್ತಾರೆ. ಇದೀಗ ಅದನ್ನು ನಾವು ದೊಡ್ಡದಾಗಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಮೆಹರ್ ನೆನಪಲ್ಲಿ ನಿರ್ಮಿಸಲು ಮುಂದಾಗಿದ್ದೇವೆ ಎಂದಿದ್ದಾರೆ.
ಗ್ರಾಮಸ್ಥರ ಸಹಕಾರದಿಂದ ಇನ್ನು ಎರಡೇ ತಿಂಗಳಲ್ಲಿ ಹುತಾತ್ಮ ರಾಮ್ ಮೆಹರ್ ಹೆಸರಲ್ಲಿ ದೊಡ್ಡದಾದ ರೆಸ್ಲಿಂಗ್ ರಿಂಗ್ವೊಂದು ಖೆರಿ ಮನ್ ಸಿಂಗ್ ಗ್ರಾಮದಲ್ಲಿ ತಲೆಯೆತ್ತಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.