ತಮ್ಮ ಸಂದೇಶಗಳನ್ನು ರವಾನಿಸಲು ಜನರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಿದ್ದಾರೆ. ಹೈದರಾಬಾದ್ನ ಶಿಕ್ಷಕರೊಬ್ಬರು ಎಲ್ಲಿರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂಬ ಸಂದೇಶವನ್ನು ಬಿತ್ತರಿಸಲು ಬರೋಬ್ಬರಿ 16 ಅಡಿ ಎತ್ತರ ಪೆನ್ನನ್ನು ತಯಾರಿಸಿದ್ದಾರೆ.
ಸಂಕೇತ್ ಹೈಸ್ಕೂಲ್ನ ಸಮಾಜ ಅಧ್ಯಯನದ ಶಿಕ್ಷಕರಾಗಿರುವ ಎಂ.ಶ್ರೀನಿವಾಸ್ ಆಚಾರ್ಯ ಅವರು ಈ ಅತೀದೊಡ್ಡ ಪೆನ್ನನ್ನು ರಚಿಸಿದ್ದಾರೆ. ಇದಕ್ಕಾಗಿ ಕಲಾವಿದರಾದ ರತ್ನಂ ಮತ್ತು ಮಲ್ಲಿಕಾರ್ಜುನ ಅವರ ಸಹಾಯವನ್ನು ಪಡೆದುಕೊಂಡಿದ್ದಾರೆ.
‘ಭಾರತೀಯ ಪಾಲಿ’ ಅಂದರೆ ಭಾರತದ ಪೆನ್ನು ಎಂದು ಈ ಪೆನ್ಗೆ ಹೆಸರಿಡಲಾಗಿದ್ದು, ಹಿತ್ತಾಳೆಯಿಂದ ನಿರ್ಮಿಸಲಾಗಿದೆ. 40 ಕಿಲೋಗ್ರಾಂ ತೂಕವಿದೆ. 16 ಅಡಿ ಎತ್ತರವಿದೆ. ಎಲ್ಲರಿಗೂ ಕಡ್ಡಾಯ ಶಿಕ್ಷಣ ಎಂಬ ಸಂದೇಶವನ್ನು ಬಿತ್ತರಿಸಲು ಇದನ್ನು ರಚಿಸಲಾಗಿದೆ.
ಹಿತ್ತಾಳೆ ಶೀಟುಗಳನ್ನು ಪೆನ್ ಆಗಿ ಪರಿವರ್ತಿಸಲು ಒಟ್ಟು 56 ದಿನಗಳನ್ನು ಇವರು ತೆಗೆದುಕೊಂಡಿದ್ದಾರೆ, ಭಾರತೀಯ ಸಂಸ್ಕೃತಿ, ಸಂಗೀತ, ಕಲೆಗಳನ್ನೂ ಹಿತ್ತಾಳೆ ಶೀಟಿನ ಮೇಲೆ ಬಿಂಬಿಸಲಾಗಿದೆ.
ಈ ಪೆನ್ ತಯಾರಿಕೆಗೆ ಆಚಾರ್ಯ ಅವರು ಬರೋಬ್ಬರಿ 250,000 ರೂಪಾಯಿಗಳನ್ನು ವ್ಯಯಿಸಿದ್ದಾರೆ. ಪೆನ್ ಶಿಕ್ಷಣದ ಬಹುಮುಖ್ಯ ಪರಿಕರವಾಗಿದೆ. ಶಿಕ್ಷಣದ ಹಕ್ಕನ್ನು ತಂದ ಸರ್ಕಾರಕ್ಕೆ ಗೌರವ ಸಲ್ಲಿಸುವ ಸಲುವಾಗಿಯೂ ಇದನ್ನು ರಚಿಸಲಾಗಿದೆ.
ಶಿಕ್ಷಣದ ಹಕ್ಕು ಎಲ್ಲಾ ಭಾರತೀಯರಿಗೂ ಸಿಕ್ಕಾಗ ಮಾತ್ರ ಭಾರತದಿಂದ ಅನಕ್ಷರತೆ ನಿರ್ಮೂಲನೆಗೊಳ್ಳುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಉದ್ದೇಶವೂ ಈ ಪೆನ್ನ ರಚನೆಯ ಹಿಂದಿದೆ. ಎಲ್ಲಾ ಭಾರತೀಯರ ಪರವಾಗಿ ಈ ಪೆನ್ನನ್ನು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉಡುಗೊರೆಯಾಗಿ ನೀಡುವುದಾಗಿ ಆಚಾರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.