ಬಂಟ್ವಾಳ : ಶತಮಾನೋತ್ಸವವನ್ನು ಆಚರಿಸುತ್ತಿರುವ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ, ಹಾಗು ಇದರ ಆಡಳಿತ ಮಂಡಳಿ ಅಂದಿನ ಅದೇ ಆದರ್ಶಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಅಂದು ದೇಶದ ಪ್ರಪ್ರಥಮ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಈ ಶಾಲೆ ಇನ್ನೊಮ್ಮೆ ರಾಷ್ಟ್ರಪ್ರಶಸ್ತಿಗೆ ಅರ್ಹವಾಗಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜಾ ಶಾಲಾ ಆರಂಭೋತ್ಸವ ಮತ್ತು ಉನ್ನತೀಕರಿಸಿದ 8 ನೇ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಆಡಳಿತಮಂಡಳಿ ಅಧ್ಯಕ್ಷರಾದ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಮೆಸ್ಕಾಂ ನಿರ್ದೇಶಕರಾದ ಸುರೇಂದ್ರ ಕಂಬಳಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ ಪೂಂಜಾ, ಶತಮಾನೋತ್ಸವ ಸಮಿತಿಯ ಖಜಾಂಚಿ ಸುಂದರ ಶೆಟ್ಟಿ ಕಲ್ಲ ತಡಮೆ, ಅಡ್ಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಶಾ ಪ್ರಕಾಶ್, ಪಂಚಾಯತ್ ಸದಸ್ಯರುಗಳಾದ ಸಂತೋಷ್, ಸುಕುಮಾರ್, ಜಯಶ್ರೀ, ಪವಿತ್ರ ಲಕ್ಷ್ಮಣ್, ಅಡ್ಯಾರ್ ಗ್ರಾಮ ಪಂಚಾಯತ್ ಪಿ ಡಿ ಒ ಒಲಿವರ್ ಪಿಂಟೋ, ಸದಾನಂದ ಅಳ್ವ ಕಂಪ, ಹರೂನ್ ರಶೀದ್, ಪ್ರಕಾಶ್ ಚಂದ್ರ ರೈ, ಚಂದ್ರಶೇಖರ ಗಾಂಭೀರ, ಪ್ರದೀಪ್ ಅಡ್ಯಾರ್, ಸುದೀಪ್, ಶತಮಾನೋತ್ಸವ ಸಮಿತಿಯ ದಿನಕರ, ಜಯ ಮಂಟಮೆ, ಜಯಶ್ರೀ ಉದಯಕುಮಾರ ಶೆಟ್ಟಿ, ಆಶಾ ಚಂದ್ರ, ಲಕ್ಶ್ಮಣ ಕುಂಪನಮಜಲು, ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ, ಮತ್ತಿತರರು ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಜಯರಾಮ ಶೇಖ ಇವರು ಸ್ವಾಗತಿಸಿದರು. ಶಾಲಾ ಸಂಚಾಲಕರಾದ ಗೋವಿಂದ ಶೆಣೈ ವಂದಿಸಿದರು ಶಾಲಾ ಮುಖ್ಯೋಪಾಧ್ಯಾಯರಾದ ದೇವದಾಸ ಕೆ. ಆರ್. ರವರು ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.