ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಬಿಗ್ಎಫ್ಎಂ ಹೊತ್ತು ತರುತ್ತಿದೆ ‘ಅಮ್ಮನ ಕನಸು’ ಎಂಬ ಚಲನಚಿತ್ರ.
ಕನ್ನಡದ ಜನಪ್ರಿಯ ನಟಿ ಪದ್ಮಜಾರಾವ್ ಅವರು ಈ ಚಿತ್ರದಲ್ಲಿ ಹೆಣಗಾಡುತ್ತಿರುವ ತಾಯಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
14 ಮೇ ಸಂದರ್ಭ ವಿಶ್ವತಾಯಂದಿರ ದಿನ ಅಂಗವಾಗಿ ರೇಡಿಯೊ ಜಾಲವು ಈ ಕೊಡುಗೆಯನ್ನು ನೀಡುತ್ತಿದ್ದು, ಬೆಂಗಳೂರಿನಲ್ಲಿ ಅತ್ಯಂತ ಪ್ರಮುಖ ಚಿತ್ರವನ್ನು ನಿರಂತರ ಎರಡು ಗಂಟೆ ಪ್ರಭಾವಿ ರೇಡಿಯೊ ಚಿತ್ರ ಪ್ರಸಾರ ಮಾಡಲಿದೆ.
ಬೆಂಗಳೂರು : ಬಿಗ್ಎಫ್ ಎಂ ದೇಶದ ನಂ.1 ರೇಡಿಯೊಜಾಲವಾಗಿದ್ದು, ತಾಯಿತ ಸ್ಥಾನದ ಅದಮ್ಯಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರ ಗುರಿಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಈ ಚಿತ್ರದ ಮೂಲಕ ಮತ್ತೆ ಚಲನಚಿತ್ರದತ್ತ ರೇಡಿಯೊ ಕಾಲಿರಿಸುತ್ತಿದೆ. ತಮ್ಮ ಕೇಳುಗರಿಗೆ ಒಂದು ವಿಶಿಷ್ಠ ಥೀಮ್ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಕಳೆದ ಎರಡು ವರ್ಷದಿಂದ ರೇಡಿಯೊಜಾಲವು ತನ್ನ ವಿಷಯಾಧಾರಿತ ರೇಡಿಯೊ ಚಲನಚಿತ್ರಗಳ ಮೂಲಕ ತಾಯಿಯನ್ನು ಕುರಿತಾದ ಹಲವು ಮುಖಗಳನ್ನು ಪರಿಚಯಿಸಿದೆ. ತಮ್ಮ ಮೊಟ್ಟ ಮೊದಲ ಚಲನಚಿತ್ರ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವ ತಾಯಿಯ ಮತ್ವದ ಪಾತ್ರ ವಿವರಿಸುವ ಚಿತ್ರ ಬಂತು. ಇಲ್ಲಿ ಲೇಖಕರು ತಾಯಿ ತನ್ನ ಜೀವನದುದ್ದಕ್ಕೂ ಯಾವ ರೀತಿ ಮಗಳಿಗಾಗಿ ತ್ಯಾಗ ಮಾಡುತ್ತಾ ಸಾಗುತ್ತಾಳೆ ಎನ್ನುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು. ಈ ವರ್ಷ ‘ಅಮ್ಮನ ಕನಸು’ ಚಿತ್ರ ಪ್ರಸಾರವಾಗುತ್ತಿದೆ. ಜನಪ್ರಿಯ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಮೂಡಿಬರಲಿದೆ. ಹೆಣಗಾಡುವ ತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತು ಚಿತ್ರದುದ್ದಕ್ಕೂ ಅಯ್ಯರ್ ಅವರು ಕೇಳುಗರನ್ನು ಭಾವನಾತ್ಮಕವಾಗಿ ತಮ್ಮ ಮಾತುಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ಜನಪ್ರಿಯ ಕನ್ನಡ ಚಿತ್ರನಟಿ ಪದ್ಮಜಾರಾವ್ ಈ ಚಿತ್ರದ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಮೇ 14 ರಂದು ಬೆಂಗಳೂರಿನ ಕೇಳುಗರಿಗಾಗಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಸಾರವಾಗಲಿದೆ. ಅದೇ ದಿನ ಸಂಜೆ 7 ಗಂಟೆಗೆ ಮರು ಪ್ರಸಾರವಾಗಲಿದೆ.
ಬಿಗ್ಎಫ್ಎಂ ಉದ್ದೇಶ ಈ ದಿನದ ಮಹತ್ವವನ್ನು ಸಾರುವುದು, ಸದಾ ನೆನಪಿನಲ್ಲಿ ಇರುವಂತೆ ಮಾಡುವುದು ಆಗಿದೆ. ಅದೂ ಒಂದು ವಿಶಿಷ್ಟ ರೀತಿಯಲ್ಲಿ. ಹಾಗೂ ತನ್ನ ಮೂಲ ಮತ್ತು ತಾಜಾ ವಿಷಯ ಸ್ವರೂಪಗಳ ನಡುವಿನ ವ್ಯತ್ಯಾಸ ಅರಿಯುವುದು, ಅಲ್ಲದೇ ಪ್ರತಿ ವರ್ಷ ತನ್ನ ಕೇಳುಗರಿಗೆ ತಾಯಿಯ ಬದುಕಿನ ಪಥದ ಸತ್ಯದ ಅರಿವು ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ. ಈ ವರ್ಷ ಬಿಗ್ಎಫ್ಎಂ ಪ್ರಸಾರ ಮಾಡುತ್ತಿರುವ ಚಿತ್ರವು ತಾಯಿ ಬದುಕಿನುದ್ದಕ್ಕೂ ತನ್ನ ಮಗಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ ಇದೆ. ಕೇಳುಗರಿಗೆ ಇದನ್ನು ಮನೋಜ್ಞವಾಗಿ ಸಿದ್ಧಪಡಿಸಲಾಗಿದೆ. ಎರಡು ಗಂಟೆ ಕಾಲಾವಧಿಯ ಚಿತ್ರ ಬಿಗ್ ಎಫ್ಎಂ ಕಡೆಯಿಂದ ಅಂತ್ಯವಿಲ್ಲದ ತಾಯಂದಿರ ಶ್ರಮಕ್ಕೆಅರ್ಪಿತವಾಗಿದೆ.
ತಾಯಂದಿರ ದಿನದಂತ ವಿಶಿಷ್ಟ ಸಂದರ್ಭದಲ್ಲಿ ಇಂತದ್ದೊಂದು ನವೀನ ಅವಕಾಶ ನೀಡಿರುವ ಕುರಿತು ಮಾತನಾಡಿರುವ ಬಿಗ್ಎಫ್ನ ವಕ್ತಾರರೊಬ್ಬರು, ರೇಡಿಯೊ ಎಂಬ ಒಂದು ಸಾಧನವು ಕೊಟ್ಯಂತರ ಅಭಿಮಾನಿಗಳನ್ನು ತಲುಪುವ ಮಾಧ್ಯಮ. ಮನರಂಜನೆಯನ್ನು ನೀಡುವ ಜತೆಜತೆಗೆ ಇದು ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತು ಕೂಡ ಜನರನ್ನು ಜಾಗೃತಗೊಳಿಸುತ್ತಿರುತ್ತದೆ. ಬಿಗ್ಎಫ್ಎಂ ಕೇಳುಗರಿಗೆ ಪ್ರಮುಖ ಸಂದೇಶವನ್ನು ರವಾನಿಸುವ ಮಾದರಿಯ ಕಾರ್ಯಕ್ರಮವನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಜನಪ್ರಿಯವಾಗಿದೆ. ಅದೂ ಅಪರೂಪದ ಹಾಗೂ ತೊಡಗಿಸಿಕೊಳ್ಳುವ ರೀತಿಯಲ್ಲಿ ಸಿದ್ಧಪಡಿಸುತ್ತದೆ. ತನ್ನ ಸಾಧನೆಯ ಮಾರ್ಗದಲ್ಲಿ ‘ಅಮ್ಮನ ಕನಸು’ ಕೂಡ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ರೇಡಿಯೊ ಚಲನಚಿತ್ರದ ಮೂಲಕ ನಾವು ನಮ್ಮ ಕೇಳುಗರನ್ನು ತಾಯಿಯ ವಿಚಾರವಾಗಿ ಉತ್ತೇಜಿಸುವ ಹಾಗೂ ಪ್ರಭಾವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ತಮ್ಮ ಬದುಕನ್ನು ಆಕೆಯ ಜೀವನಕ್ಕಾಗಿ ಮುಡಿಪಿಡುವಂತೆ ಮಾಡಲು ಇದು ಸಹಕಾರಿ. ಈ ಕೊಡುಗೆಯ ಮೂಲಕ ನಾವು ವಿಶ್ವತಾಯಂದಿರ ದಿನವನ್ನು ಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.