ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡಿದೆ.
ಆರು ವರ್ಷಗಳಿಂದ ಅನಾರೋಗ್ಯದಲ್ಲಿರುವ ತಾಲ್ಲೂಕಿನ ಕಾನಗೋಡಿನ ಪ್ರವೀಣ ನಾಗೇಂದ್ರ ನಾಯ್ಕ ಎಂಬುವವರಿಗೆ ಬಳಗ ರೂ. 10,000 ಧನಸಹಾಯ ನೀಡಿದೆ.
ಭಟ್ಕಳದ ಇಬ್ಬರು ಡಯಾಲಿಸಿಸ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಹೊನ್ನಾವರದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲು ಕಳೆದುಕೊಂಡ ರೈತನಿಗೆ, ಕುಮಟಾದ ಕ್ಯಾನ್ಸರ್ ರೋಗಿಯೊಬ್ಬರಿಗೆ ಆರ್ಥಿಕ ಸಹಾಯ ನೀಡುವ ಜೊತೆಗೆ ಭಟ್ಕಳ, ಕುಮಟಾದಲ್ಲಿ ರಕ್ತದಾನ ಶಿಬಿರ ನಡೆಸಿ ಮಾದರಿ ಗ್ರೂಪ್ ಆಗಿ ಪರಿಣಮಿಸಿದೆ.
10 ಸಾವಿರ ಸದಸ್ಯರಿದ್ದಾರೆ. ಗುಂಪಿನ ಹೆಸರಿನಲ್ಲಿ ಭಟ್ಕಳದ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆ ಇದ್ದು, ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ನಾಮಧಾರಿಗಳು ಖಾತೆಗೆ ಹಣ ಜಮಾ ಮಾಡುತ್ತಾರೆ. ಸಮಾಜಕ್ಕೆ ನೆರವು ನೀಡುವ ಉದ್ದೇಶವಿದ್ದರೆ ಈ ಗುಂಪಿನಲ್ಲಿ ಸೇರಬಹುದು ಎಂದು ಭಟ್ಕಳದ ಪಾಂಡುರಂಗ ನಾಯ್ಕ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.