ಹುಬ್ಬಳ್ಳಿ : ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಮಿಡ್ ಡೇ ಮೀಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಇಎಸ್ಐ ಸ್ಕೀಂ ನಡಿ ತರುವ ಆಲೋಚನೆಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವರಾದ ಬಂಡಾರು ದತ್ತಾತ್ರೇಯ ಅವರು ಇಂದಿಲ್ಲಿ ಹೇಳಿದರು.
ಹುಬ್ಬಳ್ಳಿ ಹಾಗೂ ದಾವಣಗೆರಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ 50 ಹಾಸಿಗೆಗಳ ಸಾಮರ್ಥ್ಯವುಳ್ಳ ಅತ್ಯಾಧುನಿಕ ಇಎಸ್ಐ ಆಸ್ಪತ್ರೆಗಳ ಕಟ್ಟಡ ಉದ್ಘಾಟನೆಯನ್ನು ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆ ಬಳಿ ನೆರವೇರಿಸಿ ಮಾತನಾಡಿದ ಅವರು, ಆಸ್ಪತ್ರೆ ಉದ್ಘಾಟನೆ ಮಾಡಿರುವುದು ವೈಯಕ್ತಿಕವಾಗಿ ಸಂತೋಷ ನೀಡಿದೆ ಎಂದರು.
ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ಆಸ್ಪತ್ರೆಗಳು 33.17 ಕೋಟಿ ಮತ್ತು ೩೧.೯೮ ಕೋಟಿ ರೂಪಾಯಿಗಳ ವೆಚ್ವದಲ್ಲಿ ಅನುಕ್ರಮವಾಗಿ ಆಧುನಿಕರಣಗೊಂಡಿವೆ. ಎರಡು ಆಸ್ಪತ್ರೆಗಳು ಹೊರ ರೋಗಿ ವಿಭಾಗ, ವಾರ್ಡಗಳು, ತುರ್ತು ಚಿಕಿತ್ಸಾ ಘಟಕ ಡಯಾಗ್ನೋಸ್ಟಿಕ್ ಸೇವೆಗಳೂ, ಓಟಿ, ಐಸಿಯು, ಹಾಗೂ ಇನಷ್ಟು ಸೌಲಭ್ಯಗಳನ್ನು ಒಳಗೊಂಡಿವೆ. ಈ ಎರಡು ಆಸ್ಪತ್ರೆಗಳನ್ನು 100 ಹಾಸಿಗೆಗಳಿಗೆ ಹೆಚ್ಚಿಸಿ ಮೆಲ್ದರ್ಜೆಗೆ ಏರಿಸಲು 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಹಾಗೂ 18 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ವಿನಯ್ ಕುಲಕರ್ಣಿಯವರು ಹುಬ್ಬಳ್ಳಿ ಇಎಸ್ಐ ಆಸ್ಪತ್ರೆಯ ಮೇಲ್ವಿಚಾರಣೆಯನ್ನು ಕೇಂದ್ರ ಕಾರ್ಮಿಕ ಇಲಾಖೆಗೆ ವಹಿಸುವ ಕುರಿತು ರಾಜ್ಯಸರ್ಕಾದ ಜೊತೆ ಮಾತನಾಡುವುದಾಗಿ ಹೇಳಿದರು.
ಲೋಕಸಭಾ ಸದಸ್ಯರಾದ ಪ್ರಹ್ಲಾದ್ ಜೋಶಿಯವರು ಇಎಸ್ಐ ಸ್ಕೀಂನ ಅಡಿ ಕೇಂದ್ರ ಸರ್ಕಾರವು ಶೇ 93% ಅನುದಾನ ನೀಡುತ್ತಿದ್ದು ರಾಜ್ಯ ಸರ್ಕಾರಗಳು ಶೇ 7% ಅನುದಾನವನ್ನು ನೀಡುತ್ತಿವೆ. ಎಲ್ಲಾ ರಾಜ್ಯ ಸರ್ಕಾರಗಳು ಕೇರಳ ಸರ್ಕಾರದ ಮಾದರಿಯಲ್ಲಿ ಇಎಸ್ಐ ಸ್ಕೀಂ ಉಪಯೋಗವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಗುರುಪಾದಪ್ಪ ಶಿರೂರ, ಶಾಸಕರಾದ ಅಬ್ಬಯ್ಯ ಪ್ರಸಾದ್, ಹು-ಧಾ ಮ.ಪಾಲಿಕೆಯ ಮಹಾಪೌರ ಡಿ.ಕೆ ಚವ್ಹಾಣ, ಉಪ ಮಹಾಪೌರರಾದ ಲಕ್ಷ್ಮಿ ಬಾಯಿ ಬಿಜವಾಡ. ಪಾಲಿಕೆ ಸದಸ್ಯರಾದ ಲಕ್ಷ್ಮಣ ಮಲ್ಲೇಶಪ್ಪ ಗಂಡಗಾಳೇಕರ, ಮುತ್ತಣ್ಣವರ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.