ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಹಗರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಧಿಂಗ್ರಾ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ವಾದ್ರಾ ಅವರು 2008ರಲ್ಲಿ ಒಂದು ನಯಾಪೈಸೆ ಖರ್ಚು ಮಾಡದೆ ಭೂವ್ಯವಹಾರಗಳಲ್ಲಿ 50.50 ಕೋಟಿ ರೂಪಾಯಿ ಲಾಭ ಪಡೆದಿದ್ದಾರೆ ಎಂದು ತಿಳಿಸಿದೆ.
ಧಿಂಗ್ರಾ ಸಮಿತಿಯನ್ನು 2015ರಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸ್ಥಾಪಿಸಿದ್ದರು. ಅತೀ ಕಡಿಮೆ ಬೆಲೆಗೆ ಸರ್ಕಾರಿ ಮತ್ತು ಕೃಷಿ ಭೂಮಿಗಳು ಮಾರಾಟವಾಗುವಂತೆ ವಾದ್ರಾ ಡೀಲ್ ಮಾಡಿದ್ದರು. ಇವರ ಈ ವ್ಯವಹಾರಕ್ಕೆ ಹಿಂದಿನ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ಮಾತ್ರವಲ್ಲದೇ ಅವರ ಪತ್ನಿ ಪ್ರಿಯಾಂಕ ವಾದ್ರಾ ಅವರೂ ಭೂಹಗರಣದಲ್ಲಿ ಭಾಗಿಯಾಗಿದ್ದು, 2006ರಲ್ಲಿ ಫರಿದಾಬಾದ್ನ ಅಮಿರ್ಪುರ್ನಲ್ಲಿ 5 ಎಕರೆ ಕೃಷಿ ಭೂಮಿಯನ್ನು 15 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಚೆಕ್ ಮೂಲಕ ಹಣ ಪಾವತಿಸಿದ್ದರು. ತನ್ನ ಅಜ್ಜಿಯಿಂದ ತನಗೆ ಬಂದ ಪ್ರಾಪರ್ಟಿಯ ಬಾಡಿಗೆ ಹಣ ಇದೆಂದು ಅವರು ದಾಖಲೆ ತೋರಿಸಿದ್ದರು. ಬಳಿಕ ಅದೇ ಭೂಮಿಯನ್ನು 2010ರಲ್ಲಿ ತಾನು ಖರೀದಿ ಮಾಡಿದಾತನಿಗೆಯೇ 80 ಲಕ್ಷಕ್ಕೆ ಇವರು ಮಾರಾಟ ಮಾಡಿದ್ದರು.
ಕಡಿಮೆ ಬೆಲೆಗೆ ಸರ್ಕಾರಿ, ಕೃಷಿ ಭೂಮಿ ಖರೀದಿಸಿ ಬಳಿಕ ಸರ್ಕಾರದ ಮೇಲೆ ಒತ್ತಡ ತಂದು ಆ ಭೂಮಿಯ ದರವನ್ನು ಏರಿಸಿ ಹೆಚ್ಚಿನ ದರಕ್ಕೆ ಭೂಮಿ ಮಾರಾಟ ಮಾಡುತ್ತಿದ್ದ ಆರೋಪ ಇದೀಗ ವಾದ್ರ ದಂಪತಿಗಳ ಮೇಲೆ ಬಂದಿದೆ. ಆದರೆ ಎಂದಿನಂತೆ ಕಾಂಗ್ರೆಸ್ ಇದನ್ನು ಅಲ್ಲಗೆಳೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.