ಚಂಡೀಗಢ: 101 ವರ್ಷದ ಮನ್ನ್ ಕೌರ್ ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂದು ತೋರಿಸಿಕೊಟ್ಟ ನಮ್ಮ ದೇಶದ ಹೆಮ್ಮೆಯ ಹಿರಿಯಜ್ಜಿ. ಆಕ್ಲೆಂಡ್ನಲ್ಲಿ ಸೊಮವಾರ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್ನ 100 ಮೀಟರ್ ಓಟವನ್ನು ಗೆಲ್ಲುವ ಮೂಲಕ ಮತ್ತೊಂದು ಮಹಾನ್ ಸಾಧನೆಯನ್ನು ಈಕೆ ಮಾಡಿದ್ದು, ಇದು ಈ ಹಿರಿ ವಯಸ್ಸಿನ ಕ್ರೀಡಾಪಟು ಗೆದ್ದ 17ನೇ ಚಿನ್ನದ ಪದಕವಾಗಿದೆ.
ನ್ಯೂಜಿಲ್ಯಾಂಡ್ನಲ್ಲಿ ನಡೆದ ಈ ಕ್ರೀಡೆಯಲ್ಲಿ ಭಾಗವಹಿಸಿದ 100 ದಾಟಿದ ಏಕೈಕ ಕ್ರೀಡಾಪಟು ಇವರಾಗಿದ್ದರು. ಇದರಲ್ಲಿ ಒಟ್ಟು 25 ಸಾವಿರ ವಯಸ್ಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಗೆಲ್ಲುವುದಕ್ಕೆ ಅಲ್ಲ ಭಾಗವಹಿಸುವುದಕ್ಕೆ ಹೆಚ್ಚು ಮಹತ್ವ ನೀಡುವ ಕೌರ್ ಅವರನ್ನು ನ್ಯೂಜಿಲ್ಯಾಂಡ್ ಮಾಧ್ಯಮಗಳು ಮಿರಾಕಲ್ ಫ್ರಂಮ್ ಚಂಡೀಗಢ್ ಎಂದೇ ಬಣ್ಣಿಸಿವೆ.
ನಾನು ಓಟವನ್ನು ಎಜಾಂಯ್ ಮಾಡುತ್ತಿದ್ದೇನೆ, ತುಂಬಾ ತುಂಬಾ ಸಂತೋಷಗೊಂಡಿದ್ದೇನೆ. ಮತ್ತೊಮ್ಮೆ ಓಡುತ್ತೇನೆ. ನನ್ನ ಓಟಕ್ಕೆ ಫುಲ್ಸ್ಟಾಪ್ ಇಲ್ಲ ಎಂದು ಕೌರ್ ಹೇಳುತ್ತಾರೆ.
ಕ್ರೀಡೆಯ ಬಗ್ಗೆ ಇಷ್ಟೊಂದು ಪ್ರೀತಿ ಇರುವ ಕೌರ್ ತಮ್ಮ 93ನೇ ವಯಸ್ಸಿನಲ್ಲಿ ಕ್ರೀಡಾಪಟು ಅದರು ಎಂಬುದು ವಿಶೇಷ. ಮಗ ಗುರುದೇವ್ ಸಿಂಗ್ ಅವರೇ ಇವರನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ವೈದ್ಯಕೀಯ ತಪಾಸಣೆಗಳ ಬಳಿಕ ಇವರಿಗೆ ಕ್ರೀಡಾಪಟುವಾಗುವ ಸಮ್ಮತಿ ಸಿಕ್ಕಿತು.
ಕೌರ್ ಅವರ ಜೀವನೋತ್ಸಾಹ ಯುವಕರನ್ನೂ ನಾಚಿಸುವಂತಹುದು. ಅವರನ್ನು ನೋಡಿ ಯುವಕರು ಕಲಿಯಬೇಕಾದುದು ಬಹಳಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.