ನವದೆಹಲಿ: ಪೆಟ್ರೋಲ್ ಬಂಕ್ಗಳಲ್ಲಿ ಕ್ಯೂ ನಿಲ್ಲುವ ಸಂಕಷ್ಟದಿಂದ ಗ್ರಾಹಕರು ಪಾರಾಗುವ ಸಮಯ ಬಂದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
‘ಮುಂಗಡವಾಗಿ ಬುಕ್ಕಿಂಗ್ ಮಾಡುವವರಿಗೆ ಪೆಟ್ರೋಲಿಂ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಯ್ಕೆಯ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರು ಕ್ಯೂನಲ್ಲಿ ನಿಂತು ಸಮಯವ್ಯರ್ಥಗೊಳಿಸುವುದನ್ನು ತಪ್ಪಿಸಲು ಇದರಿಂದ ಸಹಾಯಕವಾಗಲಿದೆ’ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ.
ಪೆಟ್ರೋಲ್ ಖರೀದಿಗೆ ಪ್ರತಿನಿತ್ಯ 3.5 ಕೋಟಿ ಜನ ದೇಶ 59,595 ಪೆಟ್ರೋಲ್ ಬಂಕ್ಸ್ಗಳಿಗೆ ತೆರಳುತ್ತಾರೆ. ಕೆಲವೊಂದು ಸಮಯಗಳಲ್ಲಿ ಅತೀ ದೊಡ್ಡ ಕ್ಯೂಗಳು ಇಲ್ಲಿ ಕಂಡು ಬರುತ್ತದೆ. ಇಂತಹ ಕ್ಯೂಗಳನ್ನು ತಪ್ಪಿಸಲು ಡೋರ್ ಡೆಲಿವರಿಯತ್ತ ಚಿಂತನೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.