ಅಪ್ಪಟ ರಾಷ್ಟ್ರೀಯತಾವಾದಿ, ಶ್ರೇಷ್ಠ ತತ್ವಜ್ಞಾನಿ ಕೇಶವ್ ಚಂದ್ರ ಸೇನ್ ಅವರ ಸ್ಮರಣಾರ್ಥ 1980ರ ಎಪ್ರಿಲ್ 15ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಇವರು ಸ್ಥಾಪಿಸಿದ ಬ್ರಹ್ಮೋ ಕಾನ್ಫರೆನ್ಸ್ ಆರ್ಗನೈಜೇಶನ್ನ ಶತಮಾನೋತ್ಸವ ಸಂದರ್ಭದಲ್ಲಿ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಲಾಗಿತ್ತು.
ಕೇಶವ್ ಚಂದ್ರ ಸೇನ್ ಭಾರತದ ಕಂಡ ಶ್ರೇಷ್ಠ ತತ್ವಜ್ಞಾನಿ, ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕ, ಕಟ್ಟಾ ರಾಷ್ಟ್ರೀಯವಾದಿ. 1838ರ ನವೆಂಬರ್ 19ರಂದು ಕೋಲ್ಕತ್ತಾದಲ್ಲಿ ಇವರು ಜನಿಸಿದರು. ಪಶ್ಚಿಮಬಂಗಾಳದ ಮಧ್ಯಯುಗ ಸೇನಾ ರಾಜರುಗಳ ವಂಶಸ್ಥರಾಗಿದ್ದರು. ಹಿಂದೂ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು, ತತ್ವಶಾಸ್ತ್ರ, ಸಂಸ್ಕೃತ, ಇತಿಹಾಸ, ಭಗವದ್ಗೀತಾ ಮತ್ತು ವೇದಗಳನ್ನು ಆಳವಾಗಿ ಅಧ್ಯಯನ ನಡೆಸಿದರು.
ಬ್ರಹ್ಮ ಸಮಾಜ ಸಿದ್ಧಾಂತಗಳಿಂದ ಪ್ರೇರಿತರಾಗಿ 1857ರಲ್ಲಿ ಕೋಲ್ಕತ್ತಾ ಬ್ರಹ್ಮ ಸಮಾಜವನ್ನು ಸೇರಿಕೊಂಡರು.
ತಮ್ಮ 19ನೇ ವಯಸ್ಸಿನಲ್ಲಿಯೇ ವಯಸ್ಕರಿಗೆ ರಾತ್ರಿ ಶಾಲೆಗಳನ್ನು ತೆರೆಯುವ ಮೂಲಕ ಸಮಾಜ ಸೇವೆಗೆ ಮುಂದಾದರು. ಒರ್ವ ಪತ್ರಕರ್ತ, ಬರಹಗಾರನೂ ಆಗಿದ್ದ ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅಭಿವೃದ್ಧಿ ಮತ್ತು ಸಾಮಾಜಿಕ ಜಾಗೃತಿಗಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡರು. 1861ರಲ್ಲಿ ‘ಇಂಡಿಯನ್ ಮಿರರ್’ ಜರ್ನಲ್ ಆರಂಭಿಸಿದ ಇವರು ಬಳಿಕ ಅದನ್ನು ದಿನಪತ್ರಿಕೆಯಾಗಿ ಬದಲಾಯಿಸಿದರು.
ಹಲವಾರು ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದರು.
ಮಹಿಳೆಯರಿಗೆ, ಬಡವರಿಗೆ ಶಿಕ್ಷಣ, ಸಮಾಜಿಕ ಬಂಧನದಿಂದ ಮಹಿಳೆಯರನ್ನು ಮುಕ್ತಗೊಳಿಸುವುದು, ಅಸ್ಪೃಶ್ಯತೆ, ಜಾತೀಯತೆಯನ್ನು ಹೋಗಲಾಡಿಸುವುದು ಮುಂತಾದ ಕ್ರಾಂತಿಕಾರಿ ಚಳುವಳಿಯಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡರು. ಬಾಲ್ಯವಿವಾಹ, ಬಹುಪತ್ನಿತ್ವ ತೊಲಗಿಸಲು, ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು ಕಾನೂನು ತರಬೇಕು ಎಂದು ಆಗ್ರಹಿಸಿದ್ದರು.
Courtesy : Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.