ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ನಗರದ ಶಿವಕೃಪಾ ಟ್ರಸ್ಟ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.
ರಾಮನಗರದಲ್ಲಿರುವ ಶಿವಕೃಪಾ ಟ್ರಸ್ಟ್ನ ಕಟ್ಟಡದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ನಿವೃತ್ತ ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ ನೀಲಣ್ಣವರ ಉದ್ಘಾಟಿಸಿದರು.
ಡಾ.ಎಸ್.ಎಸ್.ಸಂಗೊಳ್ಳಿ ಅವರು, ರಕ್ತದಾನದ ಮಹತ್ವ, ಅದರಿಂದ ವೈಯಕ್ತಿಕವಾಗಿ ಆರೋಗ್ಯಕ್ಕಿರುವ ಅನುಕೂಲಗಳು, ಮಾನವೀಯತೆ ಇತ್ಯಾದಿ ಅಂಶಗಳ ಕುರಿತು ಮಾತನಾಡಿದರು.
ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ ವಿಠಲ ಮನಗೂಳಿ ಮಾತನಾಡಿ, ದೇಶಭಕ್ತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಿಷಯದ ಕುರಿತು ವಿವರಿಸಿದರು.
ಶಿಬಿರದಲ್ಲಿ ಒಟ್ಟು 64 ಯುನಿಟ್ ರಕ್ತ ಸಂಗ್ರಹವಾಗಿದ್ದು, ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಿದ್ದರು. ಕಿಶೋರ್ ಭಾತ್ಕಂಡೆ, ಟ್ರಸ್ಟ್ನ ಕಾರ್ಯದರ್ಶಿ ವೆಂಕಟೇಶ ಕರಿಕಲ್ ಹಾಗೂ ಇತರರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.