ನವದೆಹಲಿ : ದೇಶವ್ಯಾಪಿ ಪ್ರತಿನಿತ್ಯ ಇಂಧನ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳು ಇದೀಗ ಮೊದಲ ಹಂತವಾಗಿ 5 ನಗರಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿವೆ.
ಪುದುಚೇರಿ ಮತ್ತು ವೈಜಾಗ್, ವಿಶಾಖಪಟ್ಟಣಂ, ಉದಯ್ಪುರ್, ಜಮ್ಷೆಡ್ಪುರ್ ಮತ್ತು ಚಂಡೀಗಢಗಳಲ್ಲಿ ಮೇ 1 ರಿಂದ ಪ್ರತಿನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪರಿಷ್ಕರಣೆಯಾಗಲಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಒಂದಾಗಿ ಈ ನಿಯಮವನ್ನು ಜಾರಿಗೊಳಿಸಿವೆ.
ಕರೆನ್ಸಿ ವಿನಿಮಯ ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಯಿಂದ ತಮಗಾಗುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ಪ್ರತಿನಿತ್ಯ ದರ ಪರಿಷ್ಕರಿಸಲು ಈ ಕಂಪೆನಿಗಳು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದವು.
ಇದೀಗ ಇದರ ಸಾಧಕ-ಬಾಧಕಗಳನ್ನು ಅರಿತುಕೊಳ್ಳುವ ಸಲುವಾಗಿ 5 ನಗರಗಳಲ್ಲಿ ಮೊದಲ ಹಂತವಾಗಿ ಪ್ರತಿನಿತ್ಯ ದರ ಪರಿಷ್ಕರಿಸುವ ನಿಯಮವನ್ನು ಜಾರಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.