ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಾಡಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಬೇಹುಗಾರ ಎಂಬ ಸುಳ್ಳು ಆರೋಪವನ್ನು ಹೊರಿಸಿ ಕುಲಭೂಷಣ್ ಅವರನ್ನು ನೇಣುಗಂಬಕ್ಕೆ ಏರಿಸಲು ಹೊರಟಿರುವ ಪಾಕಿಸ್ಥಾನದ ಕ್ರಮವನ್ನು ನಾವು ಕಟುವಾಗಿ ಖಂಡಿಸುತ್ತೇವೆ’ ಎಂದಿದ್ದಾರೆ.
ಕುಲಭೂಷಣ್ ಬಳಿ ಭಾರತದ ವ್ಯಾಲಿಡ್ ವೀಸಾ ಇದೆ ಎಂದಿರುವ ಅವರು, ಅವರೊಬ್ಬ ಭಾರತೀಯ ಬೇಹುಗಾರ ಎಂಬ ಪಾಕಿಸ್ಥಾನದ ಆರೋಪವನ್ನು ತಳ್ಳಿ ಹಾಕಿದ್ದಾರೆ.,
ಕುಲಭೂಷಣ್ ಅವರನ್ನು ಭೇಟಿಯಾಗಲು ನಮ್ಮ ರಾಯಭಾರಿಗೂ ಪಾಕಿಸ್ಥಾನ ಅವಕಾಶಕೊಡಲಿಲ್ಲ ಎಂದಿದ್ದಾರೆ.
ಅವರನ್ನು ರಕ್ಷಿಸಲು ಏನೇನು ಬೇಕೋ ಅದನ್ನೆಲ್ಲಾ ಭಾರತ ಮಾಡಲಿದೆ, ನ್ಯಾಯ ಸಿಗಲೇ ಬೇಕು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.